ಬೆಳಗಾವಿ: ‘ಲಖನ್ ಜಾರಕಿಹೊಳಿ ನನ್ನ ಬೆನ್ನಿಗೆ ಚೂರಿ ಹಾಕಿದ’ ಎಂದು ಲಖನ್ ಸಹೋದರ, ಗೋಕಾಕ್ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ಉಪ ಚುನಾವಣೆ ಹಿನ್ನೆಲೆ, ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಮಾತನಾಡಿ, ಕಳೆದ 15 ತಿಂಗಳಿಂದ ಹಿಂದೇಯೆ ನಾನು ಬಿಜೆಪಿ ಅಭ್ಯರ್ಥಿ ಆಗಿದ್ದೆ, ಕಾನೂನು ತೊಡಗಿನಿಂದ ಬಾಯಿ ಬಿಟ್ಟಿರಲಿಲ್ಲ, ಮಾಧ್ಯಮಗಳ ಮೇಲೆ ಸಿಟ್ಟಿತ್ತು, ಆದ್ರೆ ಈಗ ನಾನು ಮಾಧ್ಯಮಗಳಿಗೆ ಕ್ಷಮೆಯಾಚಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಕ್ಷಮೆಯಾಚಿಸಿದ್ರು.
ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ..!
ನನ್ನನ್ನ ಕುತಂತ್ರದಿಂದ ಸೋಲಿಸಬೇಕು ಹೊರತು ಬೇರೆ ಮಾರ್ಗದಿಂದ ಸೋಲಿಸಲು ಸಾಧ್ಯವಿಲ್ಲ ಎಂದು
ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ವಿರುಧ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ರು, ಇವತ್ತಿನಿಂದ ಲಖನ್ ಜಾರಕಿಹೊಳಿ ನನ್ನ ತಮ್ಮ ಅಲ್ಲ.. ಡಿಸೆಂಬರ್ 5 ನಂತರ ನನ್ನ ತಮ್ಮ, ಬೇರೆಯವರ ಕುತಂತ್ರಕ್ಕೆ ಬಲಿಯಾಗಿ, ತೆಗ್ಗಿನಲ್ಲಿ ಬಿದ್ದಿದ್ದಾನೆ. ಸತೀಶ್ ಜಾರಕಿಹೊಳಿ ಮೊದಲಿನಿಂದಲೂ ನನ್ನ ವಿರೋಧಿಸಿಕೊಂಡು ಬಂದಿದ್ದಾನೆ, ಆದ್ರೆ ಲಖನ್ ಜಾರಕಿಹೊಳಿ ನನ್ನ ಜೊತೆಗೆ ಇದ್ದು ಬೆನ್ನಿಗೆ ಚೂರಿ ಹಾಕಿದ. ಸತೀಶ್ ಜಾರಕಿಹೊಳಿ ಮೇಲೆ ನನಗೆ ಸಿಟ್ಟಿಲ್ಲ, 40 ವರ್ಷದಿಂದ ನಾವು ಮಾತಾಡಲ್ಲ. ಆದ್ರೆ ಲಖನ್ ನಡೆ ನೋವು ತರಿಸಿದೆ ಎಂದರು.
ಸಿದ್ದರಾಮಯ್ಯ ನನಗಿಂತ ಜೂನಿಯರ್..!
ಅನರ್ಹ ಶಾಸಕರ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ವಿಚಾರವಾಗಿ ಮಾತನಾಡಿ, ‘ಸಿದ್ದರಾಮಯ್ಯ ನನ್ನ ಗುರುವೇ ಅಲ್ಲ, ಎಚ್.ವಿಶ್ವನಾಥ್ ನನ್ನ ಗುರು, ಮೊದಲಿಗೆ ನನಗೆ ಟಿಕೆಟ್ ಕೊಟ್ಟಿದ್ದು ಅವರೇ, ಕಾಂಗ್ರೆಸ್ ನಲ್ಲಿ ನಾನು ಸೀನಿಯರ್, ಸಿದ್ದರಾಮಯ್ಯ ನನಗಿಂತ ಜೂನಿಯರ್, ಆರ್.ಶಂಕರ್ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ರು, ಹೀಗಾಗಿ ಅವರಿಗೆ ಟಿಕೆಟ್ ನೀಡಿಲ್ಲ, ಅವರನ್ನು ಮಂತ್ರಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ’ ಎಂದು ರಮೇಶ್ ಜಾರಕಿಹೊಳಿ ಇದೇ ವೇಳೆ ಹೇಳಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post