ಚಿಕ್ಕೋಡಿ: ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಹೈಡ್ರಾಮ ನಡೆಸಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರನ್ನ ಅಡ್ಡ ಹಾಕಿ ಸವದಿಗೆ ಟಿಕೆಟ್ ನೀಡದಿದ್ರೆ ಕುಮಟಳ್ಳಿಗೆ ಮತ ಹಾಕಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಸ್ತೆ ಮೇಲೆ ಮಲಗಿ ಸಚಿವರ ವಾಹನಗಳನ್ನ ತಡೆದಿದ್ದಾರೆ ಅಂತಾ ವರದಿಯಾಗಿದೆ.
ಲಕ್ಷ್ಮಣ್ ಸವದಿ ದುಃಖದಲ್ಲೇ ನಿಮ್ಮ ಕೈ ಮುಗಿಯುತ್ತೇನೆ.. ತೆರಳಲು ಬೀಡಿ.. ಎಂದು ಕಾರ್ಯಕರ್ತರಿಗೆ ವಿನಂತಿ ಮಾಡಿಕೊಂಡಿರು. ಬಳಿಕ ಕಾರ್ಯಕರ್ತರು ಸಭೆಗೆ ಹಾಜರಾಗಲು ಬಿಟ್ಟಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ, ಸವದಿ ಮನೆಯಲ್ಲೇ ಮೂಖ ಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post