ಬೆಂಗಳೂರು: ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರ ರಚನೆಯಾಗುವ ಮಾತು ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆ ಸಚಿವ ಸಿ.ಟಿ ರವಿ ಟ್ವೀಟ್ ಮೂಲಕ ಕಾಂಗ್ರೆಸ್, ಜೆಡಿಎಸ್ ಮೇಲೆ ಕಿಡಿಕಾರಿದ್ದಾರೆ.
‘ಹಿಟ್ಟು ಹಳಸಿದ್ದಾಗ ಅದಕ್ಕೆ ಇನ್ನೊಂದು ಯಾವುದೋ ಕಾದಿತ್ತು ಅಂತ ಗಾದೆ ಇದೆ. ತಿರುಕನ ಕನಸು ಕಾಣಲು ಯಾರಿಗೂ ಲೈಸೆನ್ಸ್ ಬೇಕಿಲ್ಲ.
ಅರಮನೆಯಲ್ಲಿ ಇದ್ದ ಹಾಗೆ, ಆನೆ ಮೇಲೆ ಕೂತ್ಕೊಂಡ ಹಾಗೆ ಕಾಂಗ್ರೆಸ್, ಜೆಡಿಎಸ್ ಉಭಯ ಪಕ್ಷದವರು ಕಾಣುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ಈ ನಾಯಕರಿಗೆ ಮತ್ತೆ ತಿರುಕನ ಕನಸು ಬೀಳುತ್ತಿರಬಹುದು ಎಂದು ಟ್ವೀಟ್ ಮೂಲಕ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಹಿಟ್ಟು ಹಳಸಿದ್ದಾಗ ಅದಕ್ಕೆ ಇನ್ನೊಂದು ಯಾವುದೋ ಕಾದಿತ್ತು ಅಂತ ಗಾದೆ ಇದೆ. ತಿರುಕನ ಕನಸು ಕಾಣಲು ಯಾರಿಗೂ ಲೈಸೆನ್ಸ್ ಬೇಕಿಲ್ಲ.
ಅರಮನೆಯಲ್ಲಿ ಇದ್ದ ಹಾಗೆ, ಆನೆ ಮೇಲೆ ಕೂತ್ಕೊಂಡ ಹಾಗೆ ಕಾಂಗ್ರೆಸ್, ಜೆಡಿಎಸ್ ಉಭಯ ಪಕ್ಷದವರು ಕಾಣುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ಈ ನಾಯಕರಿಗೆ ಮತ್ತೆ ತಿರುಕನ ಕನಸು ಬೀಳುತ್ತಿರಬಹುದು.
— C T Ravi 🇮🇳 ಸಿ ಟಿ ರವಿ (@CTRavi_BJP) December 2, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post