ಬಾಲ್ ಟ್ಯಾಂಪರಿಂಗ್ನಿಂದ ಒಂದು ವರ್ಷ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಮತ್ತೆ ತಂಡಕ್ಕೆ ಗ್ರೇಟ್ ಕಮ್ಬ್ಯಾಕ್ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ತ್ರಿಶತಕ ಸಿಡಿಸಿದ ವಾರ್ನರ್, ತಮ್ಮ ಟೆಸ್ಟ್ ಕರಿಯರ್ನಲ್ಲಿ ಬೆಸ್ಟ್ ಇನ್ನಿಂಗ್ಸ್ ಆಡಿದ್ರು. ಇದೇ ವೇಳೆ ವಾರ್ನರ್ ಆಟವನ್ನ ಮನಸಾರೆ ಕೊಂಡಾಡಿದ ಪತ್ನಿ ಕ್ಯಾಂಡಿಸ್ ವಾರ್ನರ್, ಮಹಾತ್ಮ ಗಾಂಧಿಯ ಮಾತುಗಳನ್ನ ನೆನಪಿಸಿಕೊಂಡರು.
” ಜನರು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅನ್ನೋದು ಮುಖ್ಯವಲ್ಲ. ನಿಮ್ಮ ಬಗ್ಗೆ ನೀವು ಏನು ಅಂದುಕೊಳ್ಳುತ್ತೀರಾ ಅನ್ನೋದು ಮಾತ್ರ ಮುಖ್ಯ” ಅಂತ, ಕ್ಯಾಂಡಿಸ್ ವಾರ್ನರ್ ಮಹಾತ್ಮ ಗಾಂಧಿಜೀಯವರ ಮಾತುಗಳನ್ನ ನೆನಪಿಸಿಕೊಂಡು ಟ್ವೀಟ್ ಮಾಡಿದ್ರು.
Strength does not come from physical capacity. It comes from a indomitable will. (Mahatma Gandhi) It’s not important what other people believe about you. It’s only important what you believe about yourself. @davidwarner31 #335notout pic.twitter.com/Vlg9NVktj0
— Candice Warner (@CandyFalzon) November 30, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post