ಚಿತ್ರದುರ್ಗ: ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ, ‘ಗಂಡುಗಲಿ ಮದಕರಿನಾಯಕ’ ಸೆಟ್ಟೇರೋ ಟೈಮ್ ಬಂದಿದೆ. ಅಭಿಮಾನಿಗಳ ಪಾಲಿನ ದಾಸ ದರ್ಶನ್ ಮತ್ತೊಮ್ಮೆ ಖಡ್ಗ ಹಿಡಿದು ಬಿಗ್ ಸ್ಕ್ರೀನ್ನಲ್ಲಿ ಅಬ್ಬರಿಸಲಿದ್ದಾರೆ. ಇಂದು ಕೋಟೆನಾಡಿಗೆ ಭೇಟಿ ನೀಡಿದ ಮದಕರಿ ಟೀಮ್, ಚಿತ್ರ ಸೆಟ್ಟೇರೋ ಡೇಟ್ ಅನೌನ್ಸ್ ಮಾಡಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಐತಿಹಾಸಿಕ ನಾಯಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರದಂತ ಬಿಗ್ ಬಜೆಟ್ ಸಿನಿಮಾದಲ್ಲಿ ಅಬ್ಬರಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ದಚ್ಚು, ಇದೀಗ ಚಿತ್ರದುರ್ಗದ ಮದಕರಿನಾಯಕನ ಪಾತ್ರದಲ್ಲಿ ಮಿಂಚಲು ಕಾತುರರಾಗಿದ್ದಾರೆ. ಇಂದು ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ ಚಿತ್ರತಂಡಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಬಿ.ಎಲ್ ವೇಣು ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಡಿ 6ರಂದು ಅದ್ಧೂರಿಯಾಗಿ ಸಿನಿಮಾದ ಮೂಹೂರ್ತ
ಗಂಡುಗಲಿ ಮದಕರಿ ನಾಯಕನ ಸಿನಿಮಾಗೆ ಕನ್ನಡದ ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಬಿಗ್ ಬಜೆಟ್ ಹಾಕಿದ್ದು, ಪಂಚ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ತಂತ್ರಜ್ಞಾನದಲ್ಲಿ ಯಾವ ಬಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲದಂತೆ ನಿರ್ಮಾಣ ಮಾಡುವ ಪ್ಲ್ಯಾನ್ ಮಾಡಲಾಗಿದೆ. ಇದೆೇ ತಿಂಗಳ 6ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸಿನಿಮಾದ ಮುಹೂರ್ತ ನಡೆಯಲಿದೆ.
‘ಚಿತ್ರದಲ್ಲಿ ಇಬ್ಬರು ನಾಯಕಿಯರು’
ಚಿತ್ರದುರ್ಗ ಸೇರಿದಂತೆ ಹಲವೆಡೆ ಸೆಟ್ ಹಾಕಿ ಶೂಟಿಂಗ್ ಮಾಡಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅವರ ಹೆಸರನ್ನು ಇನ್ನೂ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಹಿರಿಯ ನಟರಾದ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಇದ್ದು, ನಾದಬ್ರಹ್ಮ ಹಂಸಲೇಖರ ಸಂಗೀತ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.
ಒಟ್ಟಾರೆ ಬ್ಯಾಕ್ ಟು ಬ್ಯಾಕ್ ಐತಿಹಾಸಿಕ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಅಬ್ಬರಿಸುತ್ತಿದ್ದು, ಮದಕರಿ ನಾಯಕನ ಪಾತ್ರದಲ್ಲಿ ದಚ್ಚು ನೋಡಲು ಅಭಿಮಾನಿ ಬಳಗ ಕಾತುರರಾಗಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿ ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದ್ದು, ದಚ್ಚು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post