ಉತ್ತರ ಕನ್ನಡ: ಶಿರಸಿಯ ಬಾಪೂಜಿ ನಗರದ ಯುವಕ ಮಂಡಳಿಯ ಕಾರ್ಯಕರ್ತರು 2020ರ ಹೊಸ ವರ್ಷವನ್ನು ಅರ್ಥ ಪೂರ್ಣವಾಗಿ ಬರಮಾಡಿಕೊಂಡಿದ್ದಾರೆ. ಈ ಹಿಂದೆ ಇಲ್ಲಿ ಒಲ್ಡ್ ಮ್ಯಾನ್ ದಹಿಸಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪಶು ವೈದ್ಯ ಹತ್ಯೆ ಪ್ರಕರಣದ ಆರೋಪಿಗಳ ಪ್ರತಿಕೃತಿಯನ್ನು ದಹಿಸುದರ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ಮಹಿಳೆಯರ , ಬಾಲಕಿಯರು ಅತ್ಯಾಚಾರವಾಗಿ ಕೊಲೆಯಾಗುತ್ತಿರುವದನ್ನು ಕೇಳಿ ರೋಸಿ ಹೋಗಿರುವ ಬಾಪೂಜಿ ನಗರದ ಯುವಕರು, ಯುವ ಜನಾಂಗಕ್ಕೆ ಒಂದು ಸ್ಪಷ್ಟ ಸಂದೇಶ ನೀಡುವ ಉದ್ದೇಶದಿಂದ ನಾಲ್ಕು ಆರೋಪಿಗಳ ಪ್ರತಿಕೃತಿಯನ್ನು ಸರಿಯಾಗಿ ರಾತ್ರಿ 12 ಗಂಟೆಗೆ ನೇಣುಹಾಕಿ ಪಟಾಕಿಯೊಂದಿಗೆ ಸುಟ್ಟುಹಾಕಿದರು.
ಈ ದೃಶ್ಯವನ್ನು ನೋಡಲು ಬಾಪೂಜಿ ನಗರ ಸೇರಿದಂತೆ ವಿವಿದೆಡೆಯಿಂದ ನೂರಾರು ಜನರು ಆಗಮಿಸಿದ್ದು, ಪ್ರತಿಕೃತಿಯನ್ನು ಸುಡುವದನ್ನು ಕಂಡು ಚಪ್ಪಾಳೆ, ಕೇಕೆ ಹಾಕುತ್ತ ಆನಂದ ಪಟ್ಟರು. ಬಾಪೂಜಿ ನಗರದ ಹಿರಿಯರು ಹಾಗೂ ಮಾಜಿ ನಗರ ಸಭೆ ಸದಸ್ಯ ರಾಚಪ್ಪ ಜೋಗಳೆಕರ್ ಪ್ರತಿಕೃತಿಗೆ ಅಗ್ನಿ ಸ್ಪರ್ಷ ಮಾಡಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post