ಶಿವಮೊಗ್ಗ: ನಿನ್ನೆ ಮಲೆನಾಡು ಶಿವಮೊಗ್ಗದಲ್ಲೂ ಹೊಸವರ್ಷದ ಸಂಭ್ರಮ ಜೋರಾಗಿತ್ತು. ವಯಸ್ಸಿನ ಭೇದವಿಲ್ಲದೆ ಜನ 2020ನ್ನ ವೆಲ್‌ಕಮ್ ಮಾಡಿದ್ದಾರೆ.
ಜಿಲ್ಲೆಯ ಹಲವೆಡೆ ವಿವಿಧ ಕ್ಲಬ್ಗಳಲ್ಲಿ ಹಲವು ಸಂಘ, ಸಂಸ್ಥೆಗಳಿಂದ ಏರ್ಪಡಿಸಿದ್ದ ನ್ಯೂ ಇಯರ್ ಪಾರ್ಟಿಯಲ್ಲಿ ಯುವಕ-ಯುವತಿಯರು ತಂಡೋಪತಂಡವಾಗಿ ಪಾಲ್ಗೊಂಡು ಮನಸೋ ಇಚ್ಛೆ ಕುಣಿದು ಸಂಭ್ರಮಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆ ವಾರದ ಮೊದಲೇ ನಗರದ ನಿದಿಗೆ ಕೆರೆ, ಮಂಡಿ ಮರ್ಚಂಟ್ಸ್ ಕ್ಲಬ್, ಕಂಟ್ರಿ ಕ್ಲಬ್, ಕಾಸ್ಮೋ ಕ್ಲಬ್ ಮತ್ತಿತರ ಕಡೆ ವಿಶೇಷ ತಯಾರಿ ನಡೆಸಿದ್ದ ಕಾರಣ ನಿಗದಿತ ಶುಲ್ಕ ಪಾವತಿಸಿ ಯುವ ಜನತೆ 2020ನ್ನ ಭರ್ಜರಿಯಾಗಿ ಬರಮಾಡಿಕೊಂಡ್ರು.
ನಡು ರಾತ್ರಿ 12ಕ್ಕೆ ಸರಿಯಾಗಿ ಅಬ್ಬರದ ಪಟಾಕಿ ಸಿಡಿತದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡ ಜನತೆ ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರಲ್ಲದೆ ವಿವಿಧ ಭಂಗಿಗಳಲ್ಲಿ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡಿದರು.
ಮನರಂಜನೆಗೆಂದೇ ವಿಶೇಷವಾಗಿ ನಿರ್ಮಿಸಿದ್ದ ವೇದಿಕೆಯಲ್ಲಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದ ಕಲಾವಿದರು, ನೃತ್ಯಪಟುಗಳು ಸೆಲೆಬ್ರೆಷನ್ ಮೂಡ್ನಲ್ಲಿದ್ದ ಯೂತ್ಸ್ನ್ನ ಸಿಕ್ಕಾಪಟ್ಟೆ ಹುರಿದುಂಬಿಸಿದ್ರು. ಇನ್ನು ನಿದಿಗೆಯ ಚುಂಚಾದ್ರಿ ವಾಟರ್ ಸ್ಪೋರ್ಟ್ಸ್ ಲೇಕ್ ವ್ಯೂ ರೆಸ್ಟೋರೆಂಟ್‌ನಲ್ಲಿ ಹಂಗೇರಿಯ ನೃತ್ಯಗಾರ್ತಿಯ ಕುಣಿತ ಪ್ರೇಕ್ಷಕರ ಮನಗೆದ್ದಿತು.
ವಿಶೇಷವಾಗಿ ನಗರದ ಹಲವೆಡೆ ತಡರಾತ್ರಿ 12ರ ತನಕ ವಿವಿಧ ರೀತಿಯ ಕೇಕ್ಗಳ ಮಾರಾಟ ಭರ್ಜರಿಯಾಗಿ ನಡೆದಿತ್ತು. ಜೊತೆಗೆ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ಭಾಗದ ಹೋಂ ಸ್ಟೇಗಳಲ್ಲೂ ವಿವಿಧೆಡೆಯಿಂದ ಆಗಮಿಸಿದ್ದ ಜನರು ಹೊಸ ವರ್ಷವನ್ನು ಆಚರಿಸಿ ಸಂಭ್ರಮಿಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post