ನವದೆಹಲಿ: ದೇಶದೆಲ್ಲೆಡೆ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಬರಮಾಡಿಕೊಂಡ್ರೆ ಇತ್ತ ಭಾರತೀಯ ವಾಯುಸೇನೆ ಕೂಡ ಸ್ಪೆಷಲ್ ಆಗಿ ದೇಶದ ಜನತೆಗೆ ನ್ಯೂ ಇಯರ್ ಶುಭಾಶಯಗಳನ್ನು ತಿಳಿಸಿದೆ.
ಈ ಬಗ್ಗೆ ವಾಯುಪಡೆ ಸಮವಸ್ತ್ರದಲ್ಲಿರುವ ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಗೌರವ ಸಲ್ಲಿಸುವಂತಹ ವಿಡಿಯೋವೊಂದನ್ನು ಭಾರತೀಯ ವಾಯುಸೇನೆ ಟ್ವೀಟ್ ಮಾಡಿದೆ.
ವಿಡಿಯೋದಲ್ಲಿ ಸುಖೋಯ್-30 ಮತ್ತು ರಾಫೆಲ್ ಜೆಟ್ಗಳು ಆಕಾಶದಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದು, ವಾಯುಪಡೆ ಸೈನಿಕರು ಎದುರಿಸುವ ಅಸಂಖ್ಯಾತ ಸವಾಲುಗಳ ಪೈಕಿ ಕಠಿಣ ಹವಾಮಾನ ಪರಿಸ್ಥಿತಿಯೂ ಒಂದು, ಅದರ ಹೊರತಾಗಿಯೂ ಶತ್ರುಪಡೆಗಳನ್ನು ಧಿಕ್ಕರಿಸಿ ನಿಲ್ಲುವುದೇ ನಮ್ಮ ಗುರಿ ಎಂದು ವಿಡಿಯೋದಲ್ಲಿ ಚಿತ್ರಿಸಲಾಗಿದೆ.
ಇನ್ನು ಈ ವಿಡಿಯೋದಲ್ಲಿ ‘ರಾಷ್ಟ್ರದ ಮೇಲಿನ ಪ್ರೇಮ, ಅದೆಂತಹ ಭಯ ಭಾವೋದ್ರೇಕಗಳಿದ್ದರೂ ಅದು ಶತ್ರುಗಳನ್ನು ಸೋಲಿಸುವ ಉತ್ಸಾಹವನ್ನಾಗಿ ಪರಿವರ್ತಿಸುತ್ತದೆ’ ಎಂದು ಹೇಳಲಾಗಿದೆ.
ವಾಯುಸೇನೆ ಬಿಡುಗಡೆ ಮಾಡಿರುವ ವಿಡಿಯೋ ಮೈ ನವಿರೇಳಿಸುವಂತಿದ್ದು, ವಾಯುಪಡೆ ಸೈನಿಕರ ಮೇಲಿನ ಗೌರವವನ್ನು ದುಪ್ಪಟ್ಟುಗೊಳಿಸುವಂತಿದೆ.
Indian Air Force wishes all a very Happy New Year 2020.
भारतीय वायु सेना की ओर से सभी को नव वर्ष की हार्दिक शुभकामनाएं।#HappyNewYear2020 #IndianAirForce #NewYearEve pic.twitter.com/QZ2b2sUyVZ
— Indian Air Force (@IAF_MCC) December 31, 2019
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post