ದೆಹಲಿ: ಅರಬ್ ದೇಶದ ದೀರ್ಘಾವಧಿ ನಾಯಕರಾಗಿದ್ದ ಓಮನ್ ಸುಲ್ತಾನ ಕಾಬೂಸ್(79) ನಿನ್ನೆ ನಿಧನರಾಗಿದ್ದಾರೆ. ಕರುಳು ಸಂಬಂಧ ಕಾಯಿಲೆಯಿಂದ ಸುಮಾರು ವರ್ಷಗಳಿಂದ ಬಳಲುತ್ತಿದ್ ಅವರು ನಿನ್ನೆ ಸಂಜೆ ನಿಧನರಾಗಿದ್ದಾರೆ.
1970ರಲ್ಲಿ ಅರಮನೆಯಲ್ಲಿ ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ತಂದೆಯನ್ನು ಪದಚ್ಯುತಗೊಳಿಸಿ ಕಾಬೂಸ್ ಅರಸೊತ್ತಿಗೆಯ ಗದ್ದುಗೇರಿದ್ದರು. ಆಗಿನಿಂದ ಬಹುತೇಕ ಐದು ದಶಕಗಳ ಕಾಲ ಓಮನ್ ಸುಲ್ತಾನರಾಗಿ ಅಧಿಕಾರ ನಡೆಸುತ್ತಾ ಬಂದಿದ್ದರು.
ಮಕ್ಕಳಿಲ್ಲದ ರಾಜನ ದೇಶದ ಉತ್ತರಾಧಿಕಾರಿ ಯಾರು..?
ಸುಲ್ತಾನ್ ಕಾಬೂಸ್ ಮದುವೆಯಾಗಿಲ್ಲ. ಹಾಗಾಗಿ ಅವರಿಗೆ ಮಕ್ಕಳಾಗಲೀ ಸೋದರರಾಗಲೀ ಯಾರೂ ಇಲ್ಲ. ಹಾಗಾಗಿ ಮುಂದಿನ ಉತ್ತರಾಧಿಕಾರಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದೊರೆಯನ್ನು ಆಯ್ಕೆ ಮಾಡುವಲ್ಲಿ ವಿಭಿನ್ನ ವಿಧಾನ ಅನುಸರಿಸುವ ಓಮನ್‍ಗೆ ಮುಂದಿನ ಸುಲ್ತಾನ ಯಾರು ಎಂಬುದು ಈಗ ಚರ್ಚೆಗೀಡಾಗಿದೆ.
ಭಾರತದ ಜೊತೆಗೆ ಕಾಬೂಸ್ ನಂಟು
ಕಾಬೂಸ್ ಅವರ ಅಜ್ಜ ಮೂಲತಃ ಭಾರತದವರು. ಇನ್ನೂ ಕಾಬೂಸ್ ತಂದೆಯೂ ಸಹ ಭಾರದಲ್ಲೇ ವಿದ್ಯಾಭ್ಯಾಸ ಮಾಡಿದ್ದರು. ಕಾಬೂಸ್ ಸಹ ತಮ್ಮ ಶೈಕ್ಷಣಿಕ ಜೀವನವನ್ನ ಭಾರತದಲ್ಲೇ ಕಳೆದಿದ್ದು, ಭಾರತದೊಂದಿಗಿನ ನಂಟಿಗೆ ಸಾಕ್ಷಿಯಾಗಿದೆ.
ಕಾಬೂಸ್ ನಿಧನಕ್ಕೆ ಗಣ್ಯರ ಸಂತಾಪ
ಇನ್ನೂ ಕಾಬೂಸ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಮಂತ್ರಿಗಳು ಮತ್ತು ಇತರ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.
Sultan Qaboos was a true friend of India and provided strong leadership for developing a vibrant strategic partnership between India and Oman. I will always cherish the warmth and affection I received from him. May his soul rest in peace.
— Narendra Modi (@narendramodi) January 11, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post