ಸಂಭಾಲ್, ಉತ್ತರ ಪ್ರದೇಶ: ಈ ಹಿಂದೆ ಹಲವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ವೋಟ್ ಹಾಕುವಂತೆ ಮನವಿ ಮಾಡಿ ಮದ್ವೆ ಕಾರ್ಡ್ನಲ್ಲಿ ಪ್ರಿಂಟ್ ಮಾಡಿಸಿದ್ದನ್ನ ನೀವೆಲ್ಲಾ ನೋಡಿದ್ರಿ. ಅದ್ರಲ್ಲೂ ಕೆಲವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ದೇಶದ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರಫೇಲ್ ಫೈಟರ್ ಜೆಟ್ ಬಗ್ಗೆಯೂ ವೆಡ್ಡಿಂಗ್ ಕಾರ್ಡ್ನಲ್ಲಿ ಪ್ರಿಂಟ್ ಮಾಡಿಸಿ, ಜನರಿಗೆ ಮಾಹಿತಿ ನೀಡಿದ್ದರು. ಆದ್ರೀಗ ಸದ್ಯ ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ಎನ್ಆರ್ಸಿ ( National Register of Citizens) ಹಾಗೂ ಸಿಎಎ (Citizenship Amendment Act) ಬಗ್ಗೆ ಮದ್ವೆ ಕಾರ್ಡ್ ಮೇಲೆ ಪ್ರಿಂಟ್ ಮಾಡಿಸಿ, ಈ ಕಾಯ್ದೆಗಳಿಗೆ ಸಪೋರ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮೋಹಿತ್ ಮಿಶ್ರಾ ಹಾಗೂ ಸೋನಮ್ ಪಥಾಕ್, ಫೆಬ್ರವರಿ 3ರಂದು ಮದ್ವೆಯಾಗುತ್ತಿದ್ದಾರೆ. ಇವರ ಈ ಮದ್ವೆ ಇನ್ವಿಟೇಶನ್ ಕಾರ್ಡ್ ಮೇಲೆ ಹಿಂದಿಯಲ್ಲಿ ದಪ್ಪ ಅಕ್ಷರದಲ್ಲಿ ನಾವು ಸಿಎಎ ಹಾಗೂ ಎನ್ಆರ್ಸಿಗೆ ಬೆಂಬಲ ನೀಡುತ್ತೇವೆ ಅಂತಾ ಪ್ರಿಂಟ್ ಮಾಡಿಸಿದ್ದಾರೆ. ಸದ್ಯ ಈ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರ 2014, ಡಿಸೆಂಬರ್ 31ರ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಧಾರ್ಮಿಕ ದಮನಿಕೆಯಿಂದ ಬಳಲಿ ಆ ದೇಶಗಳನ್ನು ಬಿಟ್ಟು ಬಂದು ಭಾರತದಲ್ಲಿ ನೆಲೆಸಿರುವ ಹಿಂದೂಗಳು, ಸಿಖ್ರ, ಪಾರ್ಸಿಗಳು, ಬೌದ್ಧರು, ಕ್ರಿಶ್ಚಿಯನ್ನರು ಹಾಗೂ ಜೈನರಿಗೆ ದೇಶದ ಪೌರತ್ವ ನೀಡಬೇಕೆನ್ನುವ ತಿದ್ದುಪಡಿ ಕಾಯ್ದೆ ಹೊರಡಿಸಿದೆ. ಆದ್ರೆ ಇದಕ್ಕೆ ಹಲವು ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಕೇಂದ್ರ ಸರ್ಕಾರ ದೇಶದಲ್ಲಿನ ಮುಸ್ಲಿಮರಿಗೆ ಅನ್ಯಾಯವಾಗುವುದಿಲ್ಲ ಅಂತಿದ್ರೆ, ಮೋದಿ ಸರ್ಕಾರ ಒಡೆದು ಆಳುತ್ತಿದೆ ಅಂತಾ ವಿಪಕ್ಷಗಳು ಆರೋಪಿಸುತ್ತಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post