ಇಕ್ವಿಡಾರ್, ಸೌತ್ ಅಮೆರಿಕಾ: ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್ದು. ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ ಯಾವತ್ತೂ ಇರಬಾರ್ದು ಅಂತಾ ನಮ್ ಯೋಗರಾಜ್ ಭಟ್ರು ಹೇಳಿದ್ದಾರೆ. ಆದ್ರೆ ಇಲ್ಲೊಬ್ಬ ಅತ್ಲಾಗೆ ಆ ಹುಡುಗಿ ಇರ್ಲಿ, ಇತ್ಲಾಗೆ ಈ ಹುಡುಗಿ ಇರ್ಲಿ ಅಂತಾ ಮೇಂಟೆನ್ ಮಾಡೋಕೋಗಿ, ಈಗ ತಾನೇ ಜಾಮೂನು ತಿಂದು ಸಿಕ್ಕಿ ಬಿದ್ದಿದ್ದಾನೆ.
ಶನಿವಾರ ಸೌತ್ ಅಮೇರಿಕಾದ ಇಕ್ವಿಡಾರ್‌ನಲ್ಲಿ ಬಾರ್ಸಿಲೋನಾ ಮತ್ತು ಡೆಲ್ಫಿನ್ ಮಧ್ಯೆ ಫುಟ್‌ಬಾಲ್ ಪಂದ್ಯ ಆಯೋಜನೆಗೊಂಡಿತ್ತು. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ದೇವಿ ಆಂಡ್ರೆಡ್ ಅನ್ನೋ ಯುವಕ, ಹುಡುಗಿ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾನೆ. ಇದು ಅಲ್ಲಿನ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಲ್ಲದೆ, ಅಲ್ಲಿನ ಟಿವಿ ಪರದೆ ಮೇಲೂ ಪ್ರಸಾರ ಆಗಿದೆ. ಆದ್ರೆ ಸ್ಟೋರಿ ಏನ್ ಗೊತ್ತಾ.? ಕಿಸ್ ಮಾಡಿದ ಆಂಡ್ರೆಡ್‌ಗೆ ಈಗಾಗ್ಲೇ ಬೇರೊಬ್ಬ ಪ್ರೇಯಸಿ ಇದ್ದಾಳಂತೆ. ಇಲ್ಲೇ ಆಗಿದ್ದು ನೋಡಿ ಎಡವಟ್ಟು..! ಯಾವಾಗ ಆಂಡ್ರೆಡ್ ಬೇರೆ ಹುಡುಗಿ ಜೊತೆ ಕಿಸ್ ಮಾಡಿದ್ನೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ತನ್ನ ಹುಡುಗನ ವಿಡಿಯೋ ನೋಡಿ ಆತನ ಪ್ರೇಯಸಿ ಬ್ರೇಕ್ ಅಪ್ ಮಾಡಿಕೊಂಡಿದ್ದಾಳೆ.
ಇತ್ತ ತನ್ನ ಪ್ರೇಯಸಿ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಕ್ಕೆ ಗರಂ ಆದ ಆಂಡ್ರೆಡ್, ವಿಡಿಯೋ ವೈರಲ್ ಮಾಡಿದವ್ರಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ನನ್ನ ಜಾಗದಲ್ಲಿ ಒಂದು ಹೆಣ್ಣಿದ್ರೆ ಹೀಗೆ ಮಾಡ್ತಿದ್ರಾ ಅಂತಾ ಪ್ರಶ್ನಿಸಿದ್ದಾನೆ. ವಿಶ್ವದಲ್ಲಿ ಮೋಸ ಮಾಡೋ ಅದೆಷ್ಟೋ ಮಹಿಳೆಯರಿದ್ದಾರೆ. ಅವ್ರ ಬಗ್ಗೆ ಮಾತ್ರ ಕಾಮೆಂಟ್ ಮಾಡಲ್ಲ, ನನ್ನ ಬಗ್ಗೆ ಯಾಕೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಬಿಟ್ಟು ಹೋದ ತನ್ನ ಪ್ರೇಯಸಿ ಮರಳಿ ಬರುವಂತೆ ಮನವಿ ಮಾಡಿದ್ದಾನೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post