ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತೊಮ್ಮೆ ಗುಂಡಿನ ಸದ್ದಿಗೆ ಬೆಚ್ಚಿಬಿದ್ದಿದೆ. ಮಹಿಳಾ ಸಬ್ಇನ್ಸ್ಪೆಕ್ಟರ್ಗೆ ಆಕೆಯ ಸಹೋದ್ಯೋಗಿಯೇ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತಾನು ಶೂಟ್ ಮಾಡ್ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ ರಾತ್ರಿ ರೋಹಿಣಿ ಪೂರ್ವ ಮೆಟ್ರೋ ನಿಲ್ದಾಣದ ಬಳಿ 26 ವರ್ಷದ ಎಸ್ಐ ಪ್ರೀತಿ ಅಹ್ಲಾವತ್, ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳದಲ್ಲಿ 3 ಗುಂಡುಗಳು ಪತ್ತೆಯಾಗಿದ್ದು, ಪ್ರೀತಿ ಅಹ್ಲಾವತ್ಗೆ 2 ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಗುಂಡು ಕಾರಿಗೆ ತಗುಲಿದ್ದು, ಗ್ಲಾಸ್ ಪುಡಿಪುಡಿಯಾಗಿದೆ. ಹರಿಯಾಣದ ಸೋನಿಪತ್ನಲ್ಲಿ ಆರೋಪಿ ಎಸ್ಐ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.
2018ರಲ್ಲಿ ದೆಹಲಿ ಪೊಲೀಸ್ ಇಲಾಖೆ ಸೇರಿದ್ದ ಪ್ರೀತಿ ಅಹ್ಲಾವತ್, ಪಟ್ಪರಾಗಂಜ್ ಕೈಗಾರಿಕಾ ಪ್ರದೇಶದ ಪೊಲೀಸ್ ಠಾಣೆಯ ಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೋನಿಪತ್ ಮೂಲದವರಾದ ಪ್ರೀತಿ, ದೆಹಲಿಯ ರೋಹಿಣಿಯಲ್ಲಿ ವಾಸವಿದ್ದರು. ಪೊಲೀಸ್ ಅಕಾಡೆಮಿಯಲ್ಲಿ ಪ್ರೀತಿ ಅಹ್ಲಾವತ್ ಜೊತೆಗೆ ಎಸ್ಐ ತರಬೇತಿ ಮುಗಿಸಿದ್ದ ದೀಪಾಂಶು ರತಿ, ದೆಹಲಿಯ ಭಜನ್ಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ನಿನ್ನೆ ರಾತ್ರಿ ರೋಹಿಣಿ ಮೆಟ್ರೋ ಸ್ಟೇಷನ್ ಬಳಿ ಪ್ರೀತಿಯ ಮೃತದೇಹ ಪತ್ತೆಯಾಗಿದೆ. ಸೋನಿಪತ್ನಲ್ಲಿ ಇವತ್ತು ಮುಂಜಾನೆ ಎಸ್ಐ ದೀಪಾಂಶು ಶವ ಪತ್ತೆಯಾಗಿದೆ. ಲವ್ ಅಫೇರ್ ಹಿನ್ನೆಲೆ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post