ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯನ್ನ ಟೀಮ್ ಇಂಡಿಯಾ ವೈಟ್ವಾಶ್ ಮಾಡಿ ಐತಿಹಾಸಿಕ ಸಾಧನೆಯನ್ನ ತನ್ನ ಹೆಸರಿಗೆ ಬರೆದುಕೊಂಡಿತ್ತು. ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಟಿ-20 ಸರಣಿಯೊಂದನ್ನ ವೈಟ್ವಾಶ್ ಮಾಡಿದ ಕೀರ್ತಿಗೆ ಟೀಂ ಇಂಡಿಯಾ ಭಾಜನವಾಗಿತ್ತು. ಆದ್ರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಒಂದೂ ಪಂದ್ಯ ಗೆಲ್ಲದೆ ವೈಟ್ವಾಶ್ ಆಗಿದೆ. ವಿಚಿತ್ರ ಅಂದ್ರೆ ಈ ರೀತಿ ವೈಟ್ವಾಶ್ ಆಗಿಯೂ ಹೊಸದೊಂದು ಸಾಧನೆ ಮಾಡಿದೆ.
ಟೀಂ ಇಂಡಿಯಾ 31 ವರ್ಷಗಳ ಬಳಿಕ ಏಕದಿನ ಸರಣಿಯೊಂದನ್ನ ಹೀನಾಯವಾಗಿ ಸೋತು ವೈಟ್ವಾಶ್ ಆಗಿದೆ. 3ಕ್ಕಿಂತ ಹೆಚ್ಚು ಪಂದ್ಯಗಳ ಏಕದಿನ ಸರಣಿಯಲ್ಲಿ 31 ವರ್ಷದ ಬಳಿಕ ಎಲ್ಲಾ ಪಂದ್ಯಗಳನ್ನು ಕೈಚೆಲ್ಲಿ ಸೋಲೊಪ್ಪಿಕೊಂಡಿದೆ.
ಇದಕ್ಕೂ ಮೊದಲು 1983ರಲ್ಲಿ ಭಾರತದಲ್ಲಿಯೇ ನಡೆದಿದ್ದ ವೆಸ್ಟ್ ಇಂಡಿಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ವೈಟ್ವಾಶ್ ಆಗಿ ತವರಿನಲ್ಲೇ ಮುಖಭಂಗ ಅನುಭವಿಸಿತ್ತು. ಇದಾದ ಬಳಿಕ 1988ರಲ್ಲಿ ನಡೆದ ವೆಸ್ಟ್ ಇಂಡಿಸ್ ವಿರುದ್ಧದ 5 ಏಕದಿನ ಪಂದ್ಯದಗಳ ಸರಣಿಯಲ್ಲಿ ವೈಟ್ವಾಶ್ ಆಗಿತ್ತು. ನಂತರ 2006ರಲ್ಲಿ ಸೌತ್ ಆಫ್ರಿಕಾ ವಿರುದ್ಧದ 5 ಏಕದಿನ ಪಂದ್ಯಗಳಲ್ಲಿ 4 ಪಂದ್ಯಗಳನ್ನ ಸೋತಿದ್ರೆ 1 ಪಂದ್ಯ ಮಳೆಯಿಂದ ರದ್ದಾಗಿ ವೈಟ್ವಾಶ್ ಭೀತಿಯಿಂದ ಪಾರಾಗಿತ್ತು.
1988ರ ವೆಸ್ಟ್ ಇಂಡಿಸ್ ಸರಣಿಯ ಬಳಿಕ ಇಂದು ನಡೆದ ನ್ಯೂಜಿಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲಿ 31 ವರ್ಷದ ಬಳಿಕ ವೈಟ್ವಾಶ್ ಆಗಿದ್ದು ಮುಖಭಂಗ ಅನುಭವಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post