ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ಅಮೂಲ್ಯ “ಫ್ಯೂಚರ್ ಗೌರಿ” ಅಂತಲೇ ಖ್ಯಾತಿ ಪಡೆದಿದ್ದಳಂತೆ.. ಗೌರಿ ಲಂಕೇಶರ ಬರಹ ಹಾಗೂ ಭಾಷಣಗಳಿಂದ ಅಮೂಲ್ಯ ಪ್ರೇರಿತಳಾಗಿದ್ದ ಆಕೆ ಗೌರಿ ಲಂಕೇಶ್ರ ರೀತಿಯೇ ಹೇರ್ಸ್ಟೈಲ್ ಬದಲಿಸಿಕೊಂಡಿದ್ದಳಂತೆ.
ಗೌರಿ ಲಂಕೇಶರ ಹತ್ಯೆ ನಂತರ 10 ಮಂದಿಯನ್ನ ಫ್ಯೂಚರ್ ಗೌರಿ ಅಂತ ಕರೆಯಲಾಗ್ತಿತ್ತಂತೆ.. ಆ ಹತ್ತು ಮಂದಿಯ ಪೈಕಿ ಅಮೂಲ್ಯ ಮುಂಚೂಣಿಯಲ್ಲಿದ್ದಳು ಎನ್ನಲಾಗಿದೆ. ಗೌರಿ ಲಂಕೇಶ್ರ ಹೇಳಿಕೆ, ಭಾಷಣಗಳನ್ನ ಅಮೂಲ್ಯ ಫಾಲೋ ಮಾಡ್ತಿದ್ದಳು ಅಂತಲೂ ಹೇಳಲಾಗಿದೆ.
ಉಳಿದ 9 ಮಂದಿ ಯಾರು..? ಅವರನ್ನ ಫ್ಯೂಚರ್ ಗೌರಿ ಅಂತ ಯಾಕೆ ಕರೆಯಲಾಗ್ತಿತ್ತು.? ಉಳಿದವರನ್ನ ವಿಚಾರಣೆ ನಡೆಸಬೇಕಾ..? ಅಮೂಲ್ಯಳಿಗೂ ಅವರಿಗೂ ಇರುವ ಸಂಬಂಧವೇನು..? ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆಯಲ್ಲಿ ಉಳಿದವರ ಪಾತ್ರ ಇದ್ಯಾ..? ಹೀಗೆ ವಿವಿಧ ಆಯಾಮಗಳಲ್ಲಿ ಅಮೂಲ್ಯಳಿಗೆ ಎಸ್ಐಟಿ ತನಿಖಾ ತಂಡ ಪ್ರಶ್ನೆಗಳ ಸುರಿಮಳೆಯನ್ನ ಸುರಿಸಿದೆಯಂತೆ. ಎಸ್ಐಟಿ ವಿಚಾರಣೆ ವೇಳೆ ಅಮೂಲ್ಯ ಕೆಲವು ಸ್ಫೋಟಕ ಮಾಹಿತಿಗಳನ್ನೂ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post