ಕಳೆದ ಒಂದೆರಡು ತಿಂಗಳು, ವಿಶ್ವದಾದ್ಯಂತ ಕೊರೊನಾ ಅಂದ್ರೆ ಜನರು ಭಯಪಡ್ತಿದ್ರು. ಸದ್ಯ ಭಾರತಕ್ಕಂತೂ ಕೊರೊನಾ ಕಾಲಿಟ್ಟಿಲ್ಲ ಅಂತ ನೆಮ್ಮದಿಯ ನಿಟ್ಟುಸಿರುಬಿಡುತ್ತಿರುವಾಗಲೇ, ಮತ್ತೊಂದು ಭಯ ಜನರಲ್ಲಿ ಕಳವಳ ಮೂಡಿಸಿದೆ. ಕೋಳಿ ಹಾಗೂ ಕೋಳಿಮೊಟ್ಟೆಯನ್ನ ತಿಂದ್ರೆ ಕೊರೊನಾ ವೈರಸ್ ಹರಡುತ್ತೆ ಅನ್ನೋ ವದಂತಿ ಭಾರತದಲ್ಲಿ ಜೋರಾಗಿದೆ. ಇದರಿಂದ ಚಿಕನ್ ಹಾಗೂ ಮೊಟ್ಟೆಗೆ ಬೇಡಿಕೆ ಕುಸಿದಿದೆ. ಈ ಹಿನ್ನೆಲೆ ಕೋಳಿಯಿಂದ ಕೊರೊನಾ ಬರಲ್ಲ ಅಂತ ಜನರಲ್ಲಿ ಜಾಗೃತಿ ಮೂಡಿಸೋ ಪ್ರಯತ್ನ ಮಾಡಲಾಗ್ತಿದೆ.
ನಿನ್ನೆಯಷ್ಟೇ ತೆಲಂಗಾಣದ ಸಚಿವರು ಕಾರ್ಯಕ್ರಮವೊಂದರ ವೇದಿಕೆ ಮೇಲೆ ಚಿಕನ್ ಪೀಸ್ ತಿನ್ನೋ ಮೂಲಕ , ಕೋಳಿ ತಿಂದ್ರೆ ಕೊರೊನಾ ವೈರಸ್ ಬರಲ್ಲ ಅಂತ ಅರಿವು ಮೂಡಿಸಿದ್ರು. ಅತ್ತ ಉತ್ತರಪ್ರದೇಶದ ಗೋರಖ್ಪುರ್ನಲ್ಲಿ ಕೊರೊನಾ ಬಗೆಗಿನ ವದಂತಿಯನ್ನ ಹೋಗಲಾಡಿಸಲು ಚಿಕನ್ ಮೇಳ ಆಯೋಜಿಸಲಾಗಿತ್ತು. ಇಲ್ಲಿ ಕೇವಲ 30 ರೂಪಾಯಿಗೆ ಫುಲ್ ಪ್ಲೇಟ್ ಚಿಕನ್ ಊಟ ನೀಡಲಾಗ್ತಿತ್ತು. ಸುದ್ದಿ ತಿಳಿದಿದ್ದೇ ತಡ, ಜನರು ಚೀಪ್ & ಬೆಸ್ಟ್ ಚಿಕನ್ ತಿನ್ನಲು ಸಾಲುಗಟ್ಟಿ ನಿಂತರು.
ಇದನ್ನೂ ಓದಿ: ಕೊರೊನಾ ಭೀತಿ, ಚಿಕನ್ ಮಾರಾಟ ಅರ್ಧಕ್ಕರ್ಧ ಕುಸಿತ..!
ಕೋಳಿ ಮೇಳವನ್ನ ಅಯೋಜಿಸಿದ್ದ ಇಲ್ಲಿನ ಪೌಲ್ಟ್ರಿ ಫಾರ್ಮ್ ಅಸೋಸಿಯೇಷನ್, ಜನರ ರೆಸ್ಪಾನ್ಸ್ ನೋಡಿ ಆಶ್ಚರ್ಯಗೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರೋ ಅಸೋಸಿಯೇಷನ್ನ ಅಧ್ಯಕ್ಷ ವಿನೀತ್ ಸಿಂಗ್, ಜನರು ಕೊರೊನಾ ಭಯದಿಂದಾಗಿ ಕಳೆದ ಒಂದು ತಿಂಗಳಿನಿಂದ ಚಿಕನ್ ತಿನ್ನೋದನ್ನೇ ಬಿಟ್ಟುಬಿಟ್ಟಿದ್ರು. ಹೀಗಾಗಿ ನಾವು ಈ ಮೇಳ ಆಯೋಜಿಸಿ, ಚಿಕನ್ ತಿನ್ನಲು ಜನರನ್ನ ಆಹ್ವಾನಿಸಿದ್ದೆವು. ಚಿಕನ್, ಮಟನ್ ಅಥವಾ ಮೀನು ತಿನ್ನೋದ್ರಿಂದ ಕೊರೊನಾ ಸೋಂಕು ಬರಲ್ಲ ಅಂತ ಜನರಿಗೆ ತಿಳಿಸೋದು ನಮ್ಮ ಉದ್ದೇಶವಾಗಿತ್ತು. ನಾವು ಮೇಳಕ್ಕೆ ಸುಮಾರು 1000 ಕೆ.ಜಿ ಚಿಕನ್ ಅಡುಗೆ ತಯಾರಿಸಿದ್ದೆವು, ಅಷ್ಟೂ ಕೂಡ ಖಾಲಿಯಾಯ್ತು ಎಂದು ಹೇಳಿದ್ದಾರೆ.
ಗೋರಖ್ಪುರ್ ರೇಲ್ವೆ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಮೇಳಕ್ಕೆ ತಂಡೋಪತಂಡವಾಗಿ ಜನರು ಬಂದಿದ್ದರಿಂದ ಇಲ್ಲಿನ ರಸ್ತೆಗಳು ಕೆಲವು ಗಂಟೆಗಳ ಕಾಲ ಬ್ಲಾಕ್ ಆಗಿದ್ದವು ಎಂದು ವರದಿಯಾಗಿದೆ.
ಇದನ್ನೂ ಓದಿ: ತಿನ್ನೋಕೆ ಚಿಕನ್ ಕೊಡಲಿಲ್ಲ ಅಂತ, ತಿಂದ್ರೆ ಕೊರೊನಾ ಬರುತ್ತೆ ಅಂತ ಊರನ್ನೇ ಬೆಚ್ಚಿ ಬೀಳಿಸಿದ..!
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post