ಬೆಂಗಳೂರು: 2020 ಬಜೆಟ್ನಲ್ಲಿ ಫಿಲ್ಮ್ ಸಿಟಿಗೆ ₹500 ಕೋಟಿ ಅನುದಾನ ನೀಡಿದ ಹಿನ್ನೆಲೆಯಲ್ಲಿ ನಟ ಯಶ್, ಸಿಎಂ ಬಿ.ಎಸ್.ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾತನಾಡಿದ ಯಶ್, ಇಡೀ ಚಿತ್ರರಂಗದ ವತಿಯಿಂದ ಸಿಎಂಗೆ ಧನ್ಯವಾದ ಹೇಳ್ತೀನಿ. ಬಜೆಟ್ನಲ್ಲಿ ಸಿನಿಮಾಗೆ ಅಂತಾ ₹500 ಕೋಟಿ ಕೊಟ್ಟಿರೋದು ಖುಷಿಯಾಗಿದೆ. ಮೊನ್ನೆ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ವಿ. ಆಗ ಈ ಬಾರಿಯ ಬಜೆಟ್ನಲ್ಲಿ ಅನುದಾನ ನೀಡುತ್ತೇನೆ ಅಂತಾ ಭರವಸೆಕೊಟ್ಟಿದ್ರು. ಆ ಮಾತಿನಂತೆ ಈಗ ಅನುದಾನ ಕೊಟ್ಟಿದ್ದಾರೆ. ಒಮ್ಮೊಮ್ಮೆ ಶೂಟಿಂಗ್ಗಾಗಿ ಬೇರೆ ರಾಜ್ಯಗಳಿಗೆ ಹೋದಾಗ ಅನ್ನಿಸ್ತ್ತಿತ್ತು, ನಮ್ಮಲ್ಲಿ ಇಂಥದ್ದೊಂದು ಇನ್ಫ್ರಾಸ್ಟ್ರಕ್ಚರ್ ಇರಬೇಕು ಅಂತಾ. ಫಿಲ್ಮ್ ಸಿಟಿಯಿಂದ ಸಿನಿಮಾ ಕಲಿಯೋರಿಗೆ ಸಹಾಯವಾಗುತ್ತೆ. ಸಿನಿಮಾ ಅನ್ನೋದು ಎಜುಕೇಷನ್ ಆಗಬೇಕು. ಹೆಸರಘಟ್ಟದಲ್ಲಿ ಫಿಲ್ಮ್ ಸಿಟಿ ಆಗುತ್ತೆ ಅಂತಾ ಹೇಳ್ತಿದ್ದಾರೆ. ಆದರೆ ವೈಯಕ್ತಿಕವಾಗಿ ನನಗೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ಆದ್ರೆ ಒಳ್ಳೆಯದು ಅನ್ನಿಸುತ್ತೆ. ಅಲ್ಲಿ ಟ್ರಾಫಿಕ್ ಕಿರಿಕಿರಿ ಇರೋದಿಲ್ಲ. ಇಲ್ಲಿ ಟ್ರಾಫಿಕ್ ಪ್ರಾಬ್ಲಮ್ ಅಂತಾ ಯಶ್ ಹೇಳಿದ್ರು.
ಇನ್ನು ಕೆಜಿಎಫ್ ಚಾಪ್ಟರ್-2 ರಿಲೀಸ್ ಡೇಟ್ ಬಗ್ಗೆ ಮಾತನಾಡಿ, ರಿಲೀಸ್ ವಿಚಾರವಾಗಿ RRR ಚಿತ್ರತಂಡ ಹಾಗೂ ನಮ್ಮ ಮಧ್ಯೆ ಚರ್ಚೆ ಆಗುತ್ತಲೇ ಇದೇ. ಕೆಜಿಎಫ್ 2ಗಾಗಿ ಸ್ವಲ್ಪ ತೂಕ ಕಡಿಮೆ ಮಾಡಿಕೊಂಡಿದ್ದೇನೆ. 1971 ರ ಸಮಯದಲ್ಲಿ ಬರೋ ಒಂದು ಲುಕ್ ಇದೇ. ಸ್ವಲ್ಪ ಫ್ಲ್ಯಾಶ್ ಬ್ಯಾಕ್ನಲ್ಲಿ ಬರೋ ಚಿಕ್ಕ ಸೀನ್ ಇದೆ. ಅದಕ್ಕಾಗಿ 8 ತಿಂಗಳಿಂದ ವರ್ಕ್ಔಟ್ ಮಾಡುತ್ತಿದ್ದೇನೆ ಅಂತಾ ಹೇಳಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post