ಬೆಂಗಳೂರು: ನಕಲಿ ವೋಟರ್ ಐಡಿ ಕಾರ್ಡ್ ಪತ್ತೆ ಪ್ರಕರಣದಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಆನಂದ್ ಕುಮಾರ್ ಹಾಗೂ ಸಂತೋಷ್ ಕುಮಾರ್ ಎಂಬವರು ಸಲ್ಲಿಸಿರೋ ಪಿಐಎಲ್ ವಿಚಾರಣೆಗೆ ಹೈಕೋರ್ಟ್ ಸಮ್ಮತಿಸಿದೆ. ಈ ಸಂಬಂಧ ಮುನಿರತ್ನ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬಿಐಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದೆ.
“ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರರು ನಾವಾಗಿದ್ದರೂ ನಮ್ಮ ಹೇಳಿಕೆಯನ್ನು ಪೊಲೀಸರು ದಾಖಲಿಸಿಲ್ಲ. ಈ ಹಿಂದೆ ರಾಕೇಶ್ ಎಂಬವರು ಸಿಬಿಐ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ ಮುನಿರತ್ನ ಬೆದರಿಕೆಯಿಂದಾಗಿ ಅವರು ವಿಚಾರಣೆ ಹಂತದಲ್ಲೇ ಕೇಸ್ ವಾಪಾಸ್ ಪಡೆದಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ತನಿಖೆಯೇ ಲೋಪಯುಕ್ತವಾಗಿದೆ. ಮುನಿರತ್ನ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಕೇಸ್ನಲ್ಲಿ ಅವರ ಪರ ಪೊಲೀಸರು ಕೆಲಸ ಮಾಡಿದ್ದಾರೆ” ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇದು ದೇಶದ ಗಮನ ಸೆಳೆದ ಕೇಸ್. ಪಾರದರ್ಶಕ ಚುನಾವಣೆಗೆ ಸವಾಲೊಡ್ಡಿದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post