ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ 2ನೇ ಮಗುವನ್ನ ನೋಡೋಕೆ ಇಬ್ಬರ ಅಭಿಮಾನಿಗಳು ಬಹುದಿನಗಳಿಂದ ಕಾಯ್ತಿದ್ದಾರೆ. ಇವರಿಗೆಲ್ಲಾ ಸಿಹಿಸುದ್ದಿ ಕೊಟ್ಟಿರೋ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಮಗನ ಫೋಟೊ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಅಭಿಮಾನಿಯೊಬ್ರು ಸೋಷಿಯಲ್ ಮೀಡಿಯಾದಲ್ಲಿ ಜೂನಿಯರ್ ಯಶ್ ಫೋಟೊ ರಿವೀಲ್ ಮಾಡುವಂತೆ ಮನವಿ ಮಾಡಿದ್ರು.. ಅದರಂತೆ ಇಷ್ಟರಲ್ಲೇ ಫೋಟೊ ರಿಲೀಸ್ ಮಾಡೋದಾಗಿ ರಾಧಿಕಾ ತಿಳಿಸಿದ್ದಾರೆ.
ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಗೆ ಈಗಾಗಲೇ ಐರಾ ಎಂಬ ಮಗಳಿದ್ದಾಳೆ. ಆ ಮಗುವಿಗೆ ಒಂದು ವರ್ಷ ತುಂಬುವ ಹೊತ್ತಿಗೆ ಅಂದ್ರೆ, ಅಕ್ಟೋಬರ್ 30 ರಂದು ಗಂಡು ಮಗುವಿಗೆ ರಾಧಿಕಾ ಪಂಡಿತ್ ಜನನ ನೀಡಿದ್ರು. ಐರಾ ಫೋಟೋವನ್ನು ರಾಕಿಂಗ್ ಜೋಡಿ ಕಳೆದ ಅಕ್ಷಯ ತೃತೀಯದಂದು ವಿಶೇಷವಾಗಿ ರಿವೀಲ್ ಮಾಡಿತ್ತು. ಇದುವರೆಗೂ 2ನೇ ಮಗುವಿನ ಮುಖವನ್ನ ಮಾಧ್ಯಮಗಳಿಗೆ ದಂಪತಿ ತೋರಿಸಿಲ್ಲ. ಹೀಗಾಗಿ ಜೂನಿಯರ್ ಯಶ್ ನ ನೋಡೋಕೆ ಕಾಯ್ತಿರೋ ಫ್ಯಾನ್ಸ್ ಗೆ ರಾಧಿಕಾ ಮಾತು ಕೇಳಿ ಸಂತೋಷವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]e.com
Discussion about this post