ಬೆಂಗಳೂರು: ನಕಲಿ ವೋಟರ್ ಐಡಿ ಕಾರ್ಡ್ ಬಳಸಿ ಚುನಾವಣೆಯಲ್ಲಿ ಗೆದ್ದಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಂದು ತುಳಸಿ ಮುನಿರಾಜುಗೌಡ ಹಾಗೂ ಮುನಿರತ್ನ ಭವಿಷ್ಯ ನಾಳೆ ನಿರ್ಧಾರವಾಗಲಿದೆ.
2018ರ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಕಲಿ ವೋಟರ್ ಐಡಿ ಕಾರ್ಡ್‌ಗಳನ್ನು ಮುನಿರತ್ನ ಬಳಕೆ ಮಾಡಿ ಗೆಲುವು ಸಾಧಿಸಿದ್ದಾರೆಂದು ತುಳಸಿ ಮುನಿರಾಜು ಗೌಡ ಆರೋಪಿಸಿದ್ರು. ಈ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ರು. 2018ರಿಂದ ಕಳೆದ ತಿಂಗಳ 28 ರವರೆಗೂ ಸತತ ವಿಚಾರಣೆಯನ್ನ ಹೈಕೋರ್ಟ್ ನಡೆಸಿದ್ದು, ನಕಲಿ ವೋಟರ್ ಐಡಿ ಕಾರ್ಡ್ ಮಾಡಿರುವುದರಿಂದ ಮುನಿರತ್ನರನ್ನ ಅನರ್ಹಗೊಳಿಸಿ, ಎರಡನೇ ಸ್ಥಾನದಲ್ಲಿರುವವರನ್ನು ಶಾಸಕರೆಂದು ಆಯ್ಕೆ ಮಾಡಬೇಕೆಂದು ತುಳಸಿ ಮುನಿರಾಜುಗೌಡ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ರು.
ನ್ಯಾ.ಕೃಷ್ಣ ದೀಕ್ಷಿತ್ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ತುಳಸಿ ಮುನಿರಾಜುಗೌಡ ಹಾಗೂ ಮುನಿರತ್ನ ಅರ್ಜಿ ವಿಚಾರಣೆಯನ್ನ ನಡೆಸಿತ್ತು. ಕಳೆದ ತಿಂಗಳ 28 ರಂದು ವಿಚಾರಣೆ ಪೂರ್ಣಗೊಳಿಸಿ ನ್ಯಾ.ಕೃಷ್ಣ ದೀಕ್ಷಿತ್ ನಾಳೆಗೆ ತೀರ್ಪು ಕಾಯ್ದಿರಿಸಿದ್ರು. ನಾಳೆ ತುಳಸಿ ಮುನಿರಾಜುಗೌಡ v/s ಮುನಿರತ್ನರ ಅರ್ಜಿಯ ತೀರ್ಪು ಪ್ರಕಟವಾಗಲಿದೆ. ವಿಶೇಷ ಅಂದ್ರೆ ಸದ್ಯ ಕಲಬುರಗಿಯಲ್ಲಿರೋ ನ್ಯಾ.ಕೃಷ್ಣ ದೀಕ್ಷಿತ್ ಮಧ್ಯಾಹ್ನ 1 ಗಂಟೆಗೆ ಕಲ್ಬುರ್ಗಿ ವಿಭಾಗೀಯ ಪೀಠದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪು ಪ್ರಕಟಿಸಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post