ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಲ್ಲಿವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 396ಕ್ಕೆ ಏರಿದ್ದು 400 ರ ಸಮೀಪದಲ್ಲಿದೆ. ಇಂದು17,237 ಜನರ 18,127 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಇನ್ನು ಮುಂದಿನ ಕೆಲವು ದಿನಗಳನ್ನು ಭಾರತೀಯರು ಗಂಭೀರವಾಗಿ ಪರಿಗಣಿಸಬೇಕಿದೆ. ಸದ್ಯ 2 ನೇ ಹಂತದಲ್ಲಿರುವ ಸೋಂಕು ಹರಡುವಿಕೆಯನ್ನು 3 ನೇ ಹಂತಕ್ಕೆ ತಲುಪದಂತೆ ಎಚ್ಚರವಹಿಸಬೇಕಾಗಿದೆ ಎಂದು ಈಗಾಗಲೇ ಡಬ್ಲ್ಯುಹೆಚ್ಓ ಸೇರಿದಂತೆ, ಡಾಕ್ಟರ್ಗಳು, ವೈದ್ಯಕೀಯ ಅಧಿಕಾರಿಗಳೂ ತಿಳಿಸಿದ್ದಾರೆ. ಎಲ್ಲೆಡೆ ರಾಜ್ಯ ಸರ್ಕಾರಗಳು ಸೋಂಕು ಹರಡದಂತಯೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post