ಕೊರೊನಾ ವಿರುದ್ಧದ ಹೋರಾಟದಲ್ಲಿ ಸೆಲೆಬ್ರಿಟಿಗಳ ಕೊಡುಗೆ ದೊಡ್ಡದಿದೆ. ಜನರ ಕಷ್ಟ ನಷ್ಟಗಳಿಂದ ನೊಂದು, ಕೈಲಾದ ಸಹಾಯ ಮಾಡ್ತಿದ್ದಾರೆ. ಕೆಲವರು ಕೋಟಿಗಟ್ಟಲೆ, ಲಕ್ಷಗಟ್ಟಲೆ ದೇಣಿಗೆ ನೀಡಿದರೇ, ಮತ್ತೆ ಕೆಲವರು ಬೀದಿಗಿಳಿದು ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಮನುಷ್ಯರ ಪಾಡು ಒಂದೆಡೆಯಾದರೇ, ಪ್ರಾಣಿಗಳ ಸಂಕಷ್ಟವೂ ಹೇಳತೀರದಾಗಿದೆ. ಜನರು ಮನೆಯಲ್ಲಿ ಲಾಕ್ ಡೌನ್ ಆಗಿರೋದ್ರಿಂದ ಪ್ರಾಣಿಗಳಿಗೆ ದಿಕ್ಕು ತೋಚದಂತಾಗಿದೆ. ಬೀದಿ ನಾಯಿಗಳಂತೂ ತಿನ್ನಲು ಏನೂ ಸಿಗದೇ ಪರಿತಪಿಸುತ್ತಿವೆ. ಇಂತಹ ಬೀದಿ ನಾಯಿಗಳ ಸಹಾಯಕ್ಕೆ ನಟಿ ಸಂಯುಕ್ತಾ ಹೊರನಾಡು ಮುಂದಾಗಿದ್ದಾರೆ.
1800 ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ..!
ಬೀದಿ ನಾಯಿಗಳು ಆಹಾರವಿಲ್ಲದೇ ಅಸಹಾಯಕವಾಗಿ ನಿಂತಿರೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರಿಂದ ಎಚ್ಚೆತ್ತುಕೊಂಡ ಕೆಲವರು ಹಾಲು, ಆಹಾರ ಪೂರೈಸಲು ಮುಂದಾಗಿದ್ದರು. ಮೊನ್ನೆಯಷ್ಟೇ ನಟಿ ಐಂದ್ರಿತಾ ಬೀದಿ ನಾಯಿಗಳಿಗೆ ಆಹಾರ ಕೊಟ್ಟು ಕೈಲಾದ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಇದೀಗ ನಟಿ ಸಂಯುಕ್ತಾ ಬೀದಿ ನಾಯಿಗಳಿಗೆ ಅಂತಲೇ ಟಾಸ್ಕ್ ಫೋರ್ಸ್ ಆರಂಭಿಸಿದ್ದಾರೆ.
ಸುಮಾರು 60ಕ್ಕೂ ಹೆಚ್ಚು ಜನರ ತಂಡ ಕಟ್ಟಿಕೊಂಡು ನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ ಈ ವಿಚಾರವಾಗಿ ಕೆಲಸ ಆರಂಭಿಸಿದ್ದಾರೆ. ಪ್ರತಿ ನಿತ್ಯ ಸುಮಾರು 1800 ಶ್ವಾನಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಬೆಂಗಳೂರು ದಕ್ಷಿಣದ ಭಾಗದಲ್ಲಿರೋ ಪ್ರತಿ ಏರಿಯಾದಲ್ಲೂ ಈ ಟಾಸ್ಕ್ ಪೋರ್ಸ್ ಕೆಲಸ ನಿರ್ವಹಿಸುತ್ತಿದೆ. ನಟಿ ಸಂಯುಕ್ತಾ ಮಾಡ್ತಿರೋ ಮಾನವೀಯ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post