ದೆಹಲಿ: ದೆಹಲಿ ರಾಜ್ಯದ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ 35ವರ್ಷದ ವೈದ್ಯರೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಆಸ್ಪತ್ರೆಯ ಹೊರರೋಗಿಗಳ ಚಿಕಿತ್ಸಾಲಯವನ್ನು ಕ್ಯಾನ್ಸಲ್ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ.
ಈ ಹಿಂದೆ ಪ್ರತಿದಿನ 1000ದಿಂದ 1500ವರೆಗೂ ಹೊರ ರೋಗಿಗಳು ಬರುತ್ತಿದ್ದರು, ಇದೀಗ ಲಾಕ್ಡೌನ್ ಪರಿಣಾಮ ದಿನಕ್ಕೆ 100ರಿಂದ 150 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದಾರೆ. ಇದೀಗ ಇಲ್ಲಿ ಕಾರ್ಯನಿರ್ವಹಿಸ್ತಿದ್ದ ವೈದ್ಯರಿಗೆ ಸೋಂಕು ತಗುಲಿರೋದ್ರಿಂದ ತೀರಾ ಅಗತ್ಯವಿರುವವರಿಗೆ ಮಾತ್ರ ಚಿಕಿತ್ಸೆ ನೀಡಬೇಕೆಂದು ಆಸ್ಪತ್ರೆ ಮಂಡಳಿ ನಿರ್ಧರಿಸಿದೆ. ಸದ್ಯ ಇಡೀ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲು ಮುಂದಾಗಿದ್ದಾರೆ.
ಇಲ್ಲಿನ ಆಂಕಾಲಜಿ ವಿಭಾಗದ ವೈದ್ಯರಾಗಿದ್ದ ಇವರು ಸದ್ಯ ರೋಹಿಣಿಯ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪತ್ನಿ ಮತ್ತು ಮಗು ಸಹ ದೆಹಲಿಯ ಲೋಕ್ ನಾಯಕ್ ಆಸ್ಪತ್ರೆಯಲ್ಲಿದ್ದು ಅವರಿಗೆ ಸೋಂಕು ಇನ್ನೂ ದೃಢಪಟ್ಟಿಲ್ಲ. ದೆಹಲಿ ಸರ್ಕಾರದ ಆರೋಗ್ಯ ಇಲಾಖೆಗೆ ದೊರಕಿರೋ ಮಾಹಿತಿ ಪ್ರಕಾರ ಈ ವೈದ್ಯರು ಯಾವುದೇ ವಿದೇಶ ಪ್ರವಾಸ ಕೈಗೊಂಡಿಲ್ಲ ಆದರೂ ಅವರಿಗೆ ಹೇಗೆ ಸೋಂಕು ತಗುಲಿದೆ ಎಂಬುದೇ ಅನುಮಾನವಾಗಿದೆ. ಆದರೆ, ಅವರ ಸಹೋದರ ಮತ್ತು ಆತನ ಪತ್ನಿ ಯುಕೆಗೆ ಹೋಗಿ ಬಂದಿದ್ರು ಅವರಿಗೆ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಇವರಿಗೆ ಸೋಂಕು ಹೇಗೆ ಹರಡಿದೆ ಎಂಬುದು ಗೊತ್ತಿಲ್ಲ. ಇವರ ಸಂಪರ್ಕಕ್ಕೆ ಯಾರಾದರು ಬಂದಿದ್ದಾರೆಯೇ ಎಂದು ಪತ್ತೆಹಚ್ಚಲಾಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post