ಬೆಂಗಳೂರು: ಪರಸ್ಪರ ಅಂತರ ಕಾಯ್ದುಕೊಳ್ಳಿ, ಗುಂಪು ಗುಂಪಾಗಿ ಸೇರಬೇಡಿ ಅಂತ ಸರ್ಕಾರ ಅದೆಷ್ಟೇ ಬಾಯಿ ಬಡ್ಕೊಂಡರೂ ಜನರು ಅದಕ್ಕೆ ಕ್ಯಾರೆ ಅಂತಿಲ್ಲ. ಜನರು ಬಿಡಿ ಜವಾಬ್ದಾರಿ ಮೆರಿಬೇಕಿದ್ದ ಸರ್ಕಾರಿ ಸಂಸ್ಥೆ ಬಿಬಿಎಂಪಿ ಜವಾಬ್ದಾರಿ ಮರೆತು ಬೇಜವಾಬ್ದಾರಿತನದಿಂದ ವರ್ತಿಸಿದೆ.
ಬೆಂಗಳೂರಿನ ನಾಗರಬಾವಿಯ ಮಾಳಗಾಳ ಮುಖ್ಯ ರಸ್ತೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದ್ದರು. ಆದ್ರೆ ಹಾಲು ವಿತರಣೆ ಸಂದರ್ಭ ಜನರಾಗಲಿ, ಬಿಬಿಎಂಪಿ ಸಿಬ್ಬಂದಿಗಳಾಗಲಿ ಪರಸ್ಪರ ಅಂತರ ಕಾಯ್ದುಕೊಳ್ಳದೇ ಅಶಿಸ್ತು ಪ್ರದರ್ಶಿಸಿದ್ದಾರೆ.
ಜನರಿಗೆ ಬೇಕಾಬಿಟ್ಟಿಯಾಗಿ ಬಿಬಿಎಂಪಿ ಹಾಲು ವಿತರಣೆ ಮಾಡಿದ್ರೆ, ಜನರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹಾಲಿಗೆ ಮುಗಿಬಿದ್ದಿದ್ದಾರೆ. ಆದ್ರೂ ಜನರನ್ನು ಎಚ್ಚರಿಸಬೇಕಿದ್ದ ಬಿಬಿಎಂಪಿ ಸಿಬ್ಬಂದಿ ತಮ್ಮ ಪಾಡಿಗೆ ತಾವು ಹಾಲು ವಿತರಿಸಿದ್ದಾರೆ.
ಇನ್ನು ನಿನ್ನೆ ಕೂಡ ಲಗ್ಗೆರೆಯಲ್ಲಿ ಉಚಿತ ಹಾಲು ಹಂಚುವಾಗ ನೂಕು ನುಗ್ಗಲು ಉಂಟಾಗಿ, ನಾಲ್ಕು ಜನ ಗಾಯಗೊಂಡಿದ್ರು. ಹೀಗಿದ್ರೂ ಪಾಠ ಕಲಿಯದ ಬಿಬಿಎಂಪಿ ಹಾಗೂ ಸಾರ್ವಜನಿಕರು ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post