ಅಹಮದಾಬಾದ್: ಸರ್ದಾರ್ ವಲ್ಲಭಾಯ್ ಪಟೇಲ್.. ದೇಶ ಇವರನ್ನು ಉಕ್ಕಿನ ಮನುಷ್ಯ ಅಂತಲೇ ಕರೆಯುತ್ತೆ. ಅಂತ ಧೀಮಂತ ನಾಯಕನ ಅತೀ ಎತ್ತರದ ಪ್ರತಿಮೆಯನ್ನು ನಿರ್ಮಿಸಿದ ಮೋದಿ ಸರ್ಕಾರ ದೇಶವನ್ನು ಒಗ್ಗೂಡಿಸಿದ ಮುತ್ಸದ್ದಿಗೆ ಮಹಾಗೌರವ ನೀಡಿದೆ. ಅಂತಹ ಅಪ್ರತಿಮ ನಾಯಕನ ಪ್ರತಿಮೆಯನ್ನೇ ಓಎಲ್ಎಕ್ಸ್ನಲ್ಲಿ ಕಿಡಿಗೇಡಿಯೊಬ್ಬ ಮಾರಾಟಕ್ಕಿದೆ ಅಂತ ಏಕತಾ ಪ್ರತಿಮೆಯ ಪೋಟೋ ಸಮೇತ ಪೋಸ್ಟ್ ಮಾಡಿದ್ದಾನೆ. ಪ್ರತಿಮೆಯ ಬೆಲೆಯನ್ನು 30 ಸಾವಿರ ಕೋಟಿಗೆ ನಿಗದಿ ಮಾಡಲಾಗಿದ್ದು ಸದ್ಯ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ
ಯಾರೋ ಕಿಡಿಗೇಡಿ ಹೀಗೆ ಒಂದು ಜಾಹೀರಾತು ನೀಡಿದ್ದರೂ ಒಎಲ್ಎಕ್ಸ್ ಅನ್ನೋ ಅತಿದೊಡ್ಡ ಆನ್ಲೈನ್ ಮಾರುಕಟ್ಟೆ ತನ್ನ ಜವಾಬ್ದಾರಿ ಮರೆತು ಯಾವುದೇ ಪರಿಶೀಲನೆ ಮಾಡದೆ ಜಾಹಿರಾತನ್ನು ಪೋಸ್ಟ್ ಮಾಡಿದೆ. ಒಎಲ್ಎಕ್ಸ್ನ ಈ ನಡೆ ಸದ್ಯ ಎಲ್ಲರನ್ನೂ ಕೆರಳಿಸಿದ್ದು. ಸ್ವಲ್ಪವೂ ಜವಾಬ್ದಾರಿ ಬೇಡವೇ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆ ಸ್ಥಳೀಯ ಆಡಳಿತ ಮಂಡಳಿ ನರ್ಮದಾ ಜಿಲ್ಲೆಯ ಕೆವಿಡಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 30 ಸಾವಿರ ಕೋಟಿ ರೂಪಾಯಿಗೆ ಏಕತಾ ಪ್ರತಿಮೆಯ ಮಾರಾಟಕ್ಕಿದೆ ಅಂತ ಹೇಳಿ ಒಎಲ್ಎಕ್ಸ್ನಲ್ಲಿ ಜಾಹಿರಾತು ನೀಡಲಾಗಿದೆ. ಅದನ್ನು ಸರಿಯಾಗಿ ಪರಿಶೀಲಿಸದೇ ಒಎಲ್ಎಕ್ಸ್ ಪಬ್ಲಿಷ್ ಮಾಡಿದೆ ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಅಂತ ನರ್ಮಾದ ಜಿಲ್ಲೆಯ ಪೊಲೀಸ್ ಉಪ ಆಯುಕ್ತ ನಿಲೇಶ್ ಡುಬೆ ಹೇಳಿದ್ದಾರೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post