ರಾಮನಗರ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ರೇವತಿ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಆದ್ರೆ ಕೊರೊನಾ ಸಂದರ್ಭದಲ್ಲಿ ನಿಖಿಲ್ ಮದುವೆಯನ್ನ ಅದ್ಧೂರಿಯಾಗಿ ಮಾಡ್ತಾರಾ? ಅಥವಾ ಸರಳವಾಗಿ ಮಾಡ್ತಾರಾ? ಎಂಬ ಕುತೂಹಲ ಅವರ ಅಭಿಮಾನಿಗಳದ್ದಾಗಿತ್ತು. ಆದ್ರೀಗ ಆ ಕುತೂಹಲಕ್ಕೆ ಖುದ್ದು ಕುಮಾರಸ್ವಾಮಿ ಅವರೇ ಬ್ರೇಕ್ ಹಾಕಿದ್ದಾರೆ. ನಿಶ್ವಯವಾದ ದಿನದಂದೇ ಮದುವೆಯನ್ನು ಮನೆಯಲ್ಲೇ ನೆರವೇರಿಸಲು ಕುಟುಂಬಸ್ಥರು ಮುಂದಾಗಿದ್ದಾರೆ.
ರಾಮನಗರದಲ್ಲಿ ಈ ಕುರಿತು ಮಾತನಾಡಿದ ಕುಮಾರಸ್ವಾಮಿ, ಇಂಥ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆ ಮಾಡಲು ಸಾಧ್ಯವೇ..? ಏಪ್ರಿಲ್ 17ರಂದೇ ಮನೆಯಲ್ಲಿಯೇ ಮದುವೆ ಮಾಡಲು ತೀರ್ಮಾನ ಮಾಡಿದ್ದೇವೆ. ಮನೆಯಲ್ಲಿ 15-20 ಕುಟುಂಬದವರೇ ಸೇರಿ ಮದುವೆ ಮಾಡುತ್ತೇವೆ . ಮದುವೆ ನಿಶ್ಚಯವಾದ ದಿನ ಒಳ್ಳೆಯದಿದೆ. ಅದನ್ನ ಮುಂದೆ ಹಾಕಲು ಸಾಧ್ಯವಿಲ್ಲ. ಅದಕ್ಕಾಗಿಯೇ ಮನೆಯಲ್ಲೇ ಮದುವೆ ಮಾಡುತ್ತೇವೆ ಅಂತ ಸ್ಪಷ್ಟಪಡಿಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post