ಬೆಂಗಳೂರು: ರಸ್ತೇಲಿ ಯಾರೋ ಕಷ್ಟಪಡ್ತಿದ್ದಾರೆ ಅಂದ್ರೂ ಅವರ ಸಹಾಯಕ್ಕೆ ಯಾರೂ ಬಾರದ ಪರಿಸ್ಥಿತಿಯನ್ನ ಕೊರೊನಾ ತಂದಿಟ್ಟಿದೆ. ಆದ್ರೆ ನಗರದಲ್ಲಿ ಊಟಕ್ಕೆ ಅಂಗಲಾಚುತ್ತಿದ್ದ ವ್ಯಕ್ತಿಗೆ ನೆರವಾಗುವ ಮೂಲಕ ಬ್ಯಾಟರಾಯನಪುರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಮೈಸೂರು ರಸ್ತೆ ಬಳಿ ವ್ಯಕ್ತಿಯೊಬ್ಬ ಎಲ್ಲೂ ಊಟ ಸಿಗದೆ ಪರದಾಡುತ್ತಿದ್ದ. ಕೊಳಕು ಬಟ್ಟೆ ಧರಿಸಿದ್ದ ಆತ ಉದ್ದದ ಗಡ್ಡ ಬಿಟ್ಟು, ಹೇರ್ ಕಟ್ ಮಾಡಿಸದೇ ಕೊಳಕಾಗಿ ಕಾಣ್ತಿದ್ದ. ಈ ವೇಳೆ ಬ್ಯಾಟರಾಯನಪುರ ಪೊಲೀಸರ ಕಣ್ಣಿಗೆ ಆತ ಕಂಡಿದ್ದಾನೆ. ತಕ್ಷಣ ಆ ವ್ಯಕ್ತಿಗೆ ಊಟ ನೀಡಿದ್ದಾರೆ. ಅಲ್ಲದೇ ಹೊಸ ಬಟ್ಟೆ ಕೊಟ್ಟು, ಹೇರ್ ಕಟ್ ಮಾಡಿಸಿದ್ದಾರೆ. ಜೊತೆಗೆ ಧರಿಸೋದಕ್ಕೆ ಮಾಸ್ಕ್ನ್ನೂ ನೀಡಿದ್ದಾರೆ. ಪೊಲೀಸರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post