ಚಿಕ್ಕೋಡಿ: ಜನರು ಮನೆಯಲ್ಲೇ ಇದ್ದರೆ ಮಾತ್ರ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯ ಎಂದು ನಿಡಸೋಸಿ ದುರದಂಡೇಶ್ವರ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ವೈರಸ್ ರೋಗ ತಡೆಗಟ್ಟಲು ಸಾರ್ವಜನಿಕರು ಸಹಕರಿಸುವ ಅವಶ್ಯಕತೆ ಇದೆ. ಜನರು ವಾರಕ್ಕೆ ಬೇಕಾಗುವ ದಿನಸಿ ವಸ್ತುಗಳನ್ನು ಒಂದೇ ಬಾರಿ ಖರೀದಿಸಿ ಮನೆಯಲ್ಲೇ ಇರಬೇಕು ಎಂದರು.
ಯಾರಾದ್ರೂ ಹೊರಗೆ ಹೋದರೆ ಮಾಸ್ಕ್ ಕಡ್ಡಾಯವಾಗಿ ಬಳಸಬೇಕು. ಇಲ್ಲದಿದ್ರೆ ನಿಮ್ಮ ಜೀವಕ್ಕೆ ಕುತ್ತು ಬರುವ ಎಲ್ಲಾ ಸಾಧ್ಯತೆ ಇದೆ. ಇಟಲಿ, ಅಮೇರಿಕಾದಲ್ಲಿ ನೋಡಿಯೂ ಅಂತಹ ತಪ್ಪುಗಳನ್ನು ಇಲ್ಲಿ ಮಾಡಬೇಡಿ. ಸರ್ಕಾರ ಹೇಳಿರುವ ನಿಯಮಗಳನ್ನು ಪಾಲಿಸಿ ಎಂದು ಹೇಳಿದರು. ನಿನ್ನೆ ಸಂಕೇಶ್ವರ ಪಟ್ಟಣದಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಶ್ರೀಗಳು ಸಾರ್ವಜನಿಕರಿಗೆ ಮಾಧ್ಯಮದ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post