ಬೆಂಗಳೂರು: ಅಧಿಕ ಅಪಾಯ ಇರುವವರಿಗೆ ಹೈಡ್ರಾಕ್ಸಿಕ್ಲೋರೋಕ್ವೀನ್ ನೀಡಲು ಐಸಿಎಂಆರ್ ಶಿಫಾರಸ್ಸು ಪತ್ರ ಹೊರಡಿಸಿದೆ. ಅಲ್ಲದೆ ಯಾರು ಯಾರಿಗೆಲ್ಲ ಈ ಮಾತ್ರೆಗಳನ್ನು ನೀಡಬಹುದು ಎನ್ನುವುದನ್ನೂ ತಿಳಿಸಿದೆ.
1 ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ.
2 ಕೋವಿಡ್-19 ತಪಾಸಣೆಗಾಗಿ ಮನ-ಮನೆಗಳಿಗೆ ಭೇಟಿ ನೀಡುತ್ತಿರುವ ಕಣ್ಗಾವಲು ತಂಡಗಳಲ್ಲಿ ಕೆಲಸ ಮಾಡುತ್ತಿರುವ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ.
3 ಕೋವಿಡ್-19 ದೃಢಪಟ್ಟ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿರುವವರಿಗೆ.
4 ರೋಗ ನಿರೋಧಕ ಕ್ರಮವಾಗಿ ನಿಯಂತ್ರಿತ ವಲಯದಲ್ಲಿ ಕೆಲಸ ಮಾಡುವವರಿಗೆ.
5 ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳಿಗೆ.
6 ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ 19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ.
7 ಆ್ಯಂಬುಲೆನ್ಸ್ ವಾಹನಗಳಲ್ಲಿ ಕೋವಿಡ್ 19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ.
8 ಪೊಲೀಸ್ ಇಲಾಖೆ ಹಾಗೂ ಇತರೆ ಯಾವುದೇ ಇಲಾಖೆಯಿಂದ ಕೋವಿಡ್ 19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ.
9 ಕೋವಿಡ್ 19 ಸಂಬಂಧ ಕೆಲಸ ನಿರ್ವಹೊಸುತ್ತಿರುವ ಖಾಸಗಿ ವೈದ್ಯಕೀಯ ವೃಂದಕ್ಕೆ.
ಅಲ್ಲದೆ, ಹಿರಿಯ ನಾಗರೀಕರು, ಈ ಹಿಂದೆಯೇ ಹೃದ್ರೋಗ ಸಮಸ್ಯೆಗಳಿಂದ ಬಳಲುತ್ತಿರುವವರು, ಜಿ6ಪಿಡಿ ಜೊರತೆ ಹೊಂದಿರುವವರು ಮತ್ತು 4- ಅಮಿನೋಕ್ವೀನೋಲೋನ್ಸ್ ಇದಕ್ಕೆ ಅತಿ ಸಂವೇದಿಯಾಗಿರುವ ವ್ಯಕ್ತಿಗಳು ಮತ್ತು ಇತರೆ ದೀರ್ಘಕಾಲಿಕ ಖಾಯಿಲೆಯಿಂದ ಬಳಲುತ್ತಿರುವವರು ಚವೈದ್ಯರ ಸಲಹೆ ಮೇರೆಗೆ ಈ ಹೈಡ್ರೋಕ್ಸಿಕ್ಲೋರೋಕ್ವೀನ್ ಮಾತ್ರೆಗಳನ್ನು ಔಷಧಿಯಾಗಿ ತೆಗೆದುಕೊಳ್ಳಬಹುದು ಎಂದು ಹೇಳಿದೆ. ಇನ್ನು 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಈ ಔಷಧಿಯನ್ನು ಶಿಫಾರಸು ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post