ಬಳ್ಳಾರಿ: ಇಂದು ಬೆಳಗ್ಗೆ 6.55 ಸುಮಾರಿಗೆ ಹಂಪಿಯಲ್ಲಿ ಭೂಮಿ ಕಂಪಿಸಿರುವ ಬಗ್ಗೆ ವರದಿಗಳು ಬರುತ್ತಿವೆ. ಇದು ತಪ್ಪು ಎಂದು “ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಜಿ” ನ್ಯೂಸ್ ಫಸ್ಟ್ಗೆ ಖಚಿತಪಡಿಸಿದೆ.
ರಿಕ್ಟರ್ ಮಾಪಕದಲ್ಲಿ 4 ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿರುವುದು ಆರ್ಟಿಫಿಶಿಯಲ್ ಫ್ಯಾಕ್ಟರ್ಗಳಿಂದ ಭೂಕಂಪನ ಮಾಪನ ಸಂಸ್ಥೆಯ ಕಾರ್ಯವಿಧಾನದಲ್ಲಿ, ಕಂಪಿಸಿದ ಹಾಗೆ ರೆಕಾರ್ಡ್ ಆಗಿದೆ ಎಂದು ಸಂಸ್ಥೆಯ ರಾಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಹೀಗಾಗಿ ವೆಬ್ಸೈಟ್ನಲ್ಲಿ ಸಹ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲ ಕಾಲಕ್ಕೆ ಆಟೋಮ್ಯಾಟಿಕ್ ಆಗಿ ಅಪ್ಡೇಟ್ ಆದ ಮಾಹಿತಿಯನ್ನು ತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.7 ರಷ್ಟು ತೀವ್ರತೆ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post