ಬೆಂಗಳೂರು: ವಿಧಿಯ ಆಟಕ್ಕೆ ಅಕಾಲಿಕ ಸಾವನ್ನಪ್ಪಿದ ಹಸನ್ಮುಖಿ ಚಿರಂಜೀವಿ ಸರ್ಜಾ ಇಂದು ಭೂತಾಯಿಯ ಒಡಲ ಸೇರಿದ್ದಾರೆ. ಕುಟುಂಬಸ್ಥರು, ಸಿನಿ ತಾರೆಯರು, ಅಭಿಮಾನಿಗಳು ಹಾಗೂ ಗಣ್ಯರು ಇಂದು ಚಿರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಬೀಳ್ಕೊಟ್ಟಿದ್ದು, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಅಜ್ಜಿ ಲಕ್ಷ್ಮಿದೇವಿ, ಪತ್ನಿ ಮೇಘನಾ, ಐಶ್ವರ್ಯ ಸರ್ಜಾ ಸಮಾಧಿ ಬಳಿ 5 ನಿಮಿಷ ಧ್ಯಾನ ಮಾಡಿ ಅಂತಿಮ ನಮನ ಸಲ್ಲಿಸಿದರು. ಇದರ ಮುಂದುವರೆದ ಭಾಗವಾಗಿ ನಾಳೆ ಅವರ ಮೂರು ದಿನದ ಹಾಲು ತುಪ್ಪ ಕಾರ್ಯಕ್ರಮ ನೆರವೇರಿಸಲು ನಿರ್ಧರಿಸಲಾಗಿದೆ.
ಕನಕಪುರದ ಧ್ರುವ ಸರ್ಜಾ ಫಾರ್ಮ್ಹೌಸ್ನಲ್ಲಿ ಹಾಲು ತುಪ್ಪ ಕಾರ್ಯಕ್ರಮ ಜರುಗಲಿದ್ದು, ಕುಟುಂಬಸ್ಥರು ಮತ್ತು ಆಪ್ತರು ಹಾಗೂ ಸ್ನೇಹಿತರು ಈ ಕಾರ್ಯದಲ್ಲಿ ಹಾಜರಿರಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post