ಚಂದನವನದಲ್ಲಿ ಮಿನುಗುತ್ತಿದ್ದ ತಾರೆ ಚಿರಂಜೀವಿ ಸರ್ಜಾ ನಿಧನ ಆಗಿ ಮೂರು ದಿನ ಕಳೆದಿದೆ. ಕುಟುಂಬದಲ್ಲಿ, ಚಿರು ಆಪ್ತ ವಲಯದಲ್ಲಿ, ಸ್ಯಾಂಡಲ್ ವುಡ್ ನಲ್ಲಿ ನೀರವ ಮೌನ ಆವರಿಸಿದೆ. ಆದ್ರೆ ಚಿರಂಜೀವಿ ಸರ್ಜಾ ಮಾವ ಅರ್ಜುನ್ ಸರ್ಜಾ ಮಾತ್ರ ಸಿಡಿದೆದ್ದು ನಿಂತಿದ್ದಾರೆ.
ಮಗನಂತಿದ್ದ ಅಳಿಯ ಚಿರು ಸಾವಿನಿಂದ ಅರ್ಜುನ್ ಸರ್ಜಾ ದುಃಖಿತರಾಗಿದ್ರು. ಎತ್ತಿ ಆಡಿಸಿದ ಹುಡುಗನ ಪಾರ್ಥಿವ ಶರೀರವನ್ನು ನಾನೇ ಹೊರಬೇಕಾಯ್ತಲ್ಲಾ ಅನ್ನೋ ನೋವಲ್ಲೇ ಇದ್ದ ಅರ್ಜುನ್ ಸರ್ಜಾ ತಮ್ಮ ಫೆಸ್ ಬುಕ್ ಅಕೌಂಟ್ ನ ಪ್ರೊಫೈಲ್ ನಲ್ಲಿ ಕಪ್ಪು ಫೋಟೋ ಹಾಕಿ ಮೌನವಾಗಿದ್ರು. ನನ್ನ ಜೊತೆ ಮಾತಾಡು ಚಿರು.. ನಿನ್ನ ಮಾವ ಬಂದಿದ್ದೀನಿ ಅಂತಾ ರಾತ್ರಿಯೆಲ್ಲ ಚಿರು ಪಾರ್ಥಿವ ಶರೀರದ ಮುಂದೆ ಕಣ್ಣೀರು ಹಾಕಿದ್ದರು.
Posted by Arjun Sarja on Tuesday, June 9, 2020
ಕಣ್ಣೀರು ಹಾಕುತ್ತಲೇ ಚಿರು ಅಂತ್ಯ ಕ್ರಿಯೆ ಮುಗಿಸಿದ ಅರ್ಜುನ್ ಸರ್ಜಾ ಈಗ ಅದ್ಯಾರ ಮೇಲೋ ಕುಸ್ತಿಗೆ ನಿಂತಂತಿದೆ. ಯಾಕಂದ್ರೆ ತಮ್ಮ ಫೇಸ್ಬುಕ್ ಅಕೌಂಟ್ನ ಪ್ರೊಫೈಲ್ ನಲ್ಲಿದ್ದ ಕಪ್ಪು ಫೋಟೋ ತೆಗೆದು ಹೋರಾಟಕ್ಕೆ ನಿಂತಂಥ ಫೋಟೋ ಹಾಕಿದ್ದಾರೆ. ಅಷ್ಟೇ ಅಲ್ಲ ಚಿರು ಜೊತೆಗಿನ ಫೋಟೋ ಹಾಕಿ ಮಿಸ್ ಯು ಬಾಯ್ ಅಂತ ಬರೆದುಕೊಂಡಿದ್ದಾರೆ.
I miss you my boy, Fate has been so cruel.
Posted by Arjun Sarja on Tuesday, June 9, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post