ಆನ್‌ಲೈನ್ ಸ್ಟ್ರೀಮಿಂಗ್ ಸರ್ವಿಸ್ ನೆಟ್‌ಫ್ಲಿಕ್ಸ್ ಇಂದು ಮಧ್ಯಾಹ್ನ ತನ್ನ ನೆಟಿಜನ್ಸ್‌ಗೆ ಒಂದು ಚಟುವಟಿಕೆ ನೀಡಿತ್ತು. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಫೋಟೋವೊಂದನ್ನು ತನ್ನ ಟ್ವಿಟರ್‌ನಲ್ಲಿ ಶೇರ್ ಮಾಡಿತ್ತು. ಇದಕ್ಕೆ ಏನು ಕ್ಯಾಪ್ಶನ್ ನೀಡ್ತೀರಿ ಅಂತಾ ನೆಟ್‌ಫ್ಲಿಕ್ಸ್ ಇಂಡಿಯಾ ಕೇಳಿತ್ತು. ಇದೀಗ ದೀಪಿಕಾ ಪಡುಕೋಣೆ ಫೋಟೋಗೆ ನಾನಾ ರೀತಿಯ ತಲೆಬರಹವನ್ನು ನೆಟ್ಟಿಗರು ಕೊಡುತ್ತಾ ಫನ್ ಕ್ರಿಯೇಟ್ ಮಾಡ್ತಿದ್ದಾರೆ.
ಟ್ವಿಟರ್‌ನಲ್ಲಿ ದೀಪಿಕಾ ಮೇಮ್ಸ್..
ದೀಪಿಕಾ ಪಡುಕೋಣೆ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಅಂದ್ರೆ ಯೇ ಜವಾನಿ ಹೈ ದಿವಾನಿ. ಈ ಚಿತ್ರದಲ್ಲಿ ಡಿಪ್ಪಿ ಕಣ್ಣಲ್ಲಿ ನೀರು ತುಂಬಿಕೊಂಡಿರೋ ಫೋಟೋವನ್ನು ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿತ್ತು. ಫೋಟೋದಲ್ಲಿ ದೀಪಿಕಾ ಅಳ್ತಿದ್ದಾರಾ? ನಗ್ತಿದ್ದಾರಾ? ಎನ್ನುವಂತೆ ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಫುಡ್ ಡೆಲಿವರಿ ಸಂಸ್ಥೆ ಜೋಮ್ಯಾಟೋ, ‘ನೋ ನೋ ಇಟ್ಸ್ ನಾಟ್ ಸ್ಪೈಸಿ ಅಟ್ ಆಲ್‘( ಇಲ್ಲ..ಇಲ್ಲ..ಇದು ಖಾರವಾಗಿಲ್ಲ) ಅಂತಾ ಕ್ಯಾಪ್ಶನ್ ನೀಡಿದೆ.
no no it's not spicy at all https://t.co/VvJD0Hzrto
— Zomato (@ZomatoIN) June 10, 2020
ಇನ್ನು ಮತ್ತೊಬ್ಬ ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದು, ಮನೆಗೆ ಯಾರಾದ್ರು ಸಂಬಂಧಿಕರು ಬಂದು ಹಣ ನೀಡದೇ ಹೋದ್ರೆ ಹೀಗೆ ಆಗುತ್ತೆ ಎಂದಿದ್ದಾರೆ.
When relatives leave the house without giving you any money pic.twitter.com/uRO4y1xIS9
— 𝙈𝙖𝙞𝙩𝙧𝙚𝙮𝙞 (@cataclyysm) June 10, 2020
ಪಾನಿಪೂರಿ ಮಾರುವ ಅಣ್ಣ ನೀವು ಕೇಳದೇ ಜಾಸ್ತಿ, ಪಾನಿಪುರಿ ಹಾಕಿದ್ರೆ ಹೀಗೆ ಆಗುತ್ತೆ ಅಂತಾ ಮತ್ತೊಬ್ಬ ನೆಟ್ಟಿಗರು ಕಾಲೆಳೆದಿದ್ದಾರೆ. ಮತ್ತೊಬ್ಬರು ನಾನು ಓದುತ್ತಿರೋದನ್ನು ನಮ್ಮ ಅಮ್ಮ ನೋಡಿದ್ರೆ ಅವ್ರ ರಿಯಾಕ್ಷನ್ ಹೀಗಿರುತ್ತೆ ಅಂತಾ ಫನ್ನಿ ಕಮೆಂಟ್ ಮಾಡಿದ್ದಾರೆ. ಹೀಗೆ ಹಲವು ಜನ ದೀಪಿಕಾ ಫೋಟೋಗೆ ಫನ್ನಿ ಕಮೆಂಟ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ಕ್ರಿಯೇಟ್ ಮಾಡಿದ್ದಾರೆ.
When pani puri wale bhayia make it more teekha even before ur asking pic.twitter.com/Q53vA6Yc8x
— Sara-Castic (@shuru_tea) June 10, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post