ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ವಿರುದ್ಧ, ಪಾಕಿಸ್ತಾನ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಗಂಭೀರ ಆರೋಪ ಮಾಡಿದ್ದಾರೆ. ಯೂನಿಸ್ ಖಾನ್ಗೆ ಬ್ಯಾಟಿಂಗ್ ಸಲಹೆ ನೀಡಲು ಹೋದಾಗ, ನನ್ನ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದರು ಎಂದು ಫ್ಲವರ್ ಆರೋಪಿಸಿದ್ದಾರೆ. ಪಾಕ್ ಬ್ಯಾಟಿಂಗ್ ಕೋಚ್ ಆಗಿದ್ದಾಗ ಆಸ್ಟ್ರೇಲಿಯಾ ಟೂರ್ಗೆ ತೆರಳಿದ್ದೆವು. ಆಗ ನಡೆದ ಆ ಘಟನೆಯಿಂದ ನಾನು ತೀವ್ರ ಭಯಗೊಂಡಿದ್ದೆ. 2016ರ ಪಾಕಿಸ್ತಾನ- ಆಸ್ಟ್ರೇಲಿಯಾ ಬ್ರಿಸ್ಬೆನ್ ಟೆಸ್ಟ್ ಪಂದ್ಯದ ವೇಳೆ ಟೆಸ್ಟ್ ಯೂನಿಸ್ ಖಾನ್ಗೆ ಸಲಹೆ ಕೊಡುತ್ತಿದೆ. ಅದು ಆತನಿಗೆ ಇಷ್ಟವಾಗಲಿಲ್ಲವೋ ಏನೋ..!! ನನ್ನ ಕುತ್ತಿಗೆ ಮೇಲೆ ಕತ್ತಿ ಇಟ್ಟಿದ್ದ. ಆಗ ನನ್ನ ಪಕ್ಕದಲ್ಲೇ ಇದ್ದ ಹೆಡ್ ಕೋಚ್ ಮಿಕಿ ಆರ್ಥರ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ರು. ಆ ಘಟನೆಯಿಂದ ನಾನು ಖಿನ್ನತೆಗೊಳಗಾಗಿದ್ದೆ. ಆದ್ರೆ ಕೋಚ್ ಆಗಿ ಇದೆಲ್ಲಾ ನನ್ನ ಪ್ರಯಾಣದ ಒಂದು ಭಾಗ ಎಂದು ಸುಮ್ಮನಾಗಿದ್ದೆ. 2016 ರಿಂದ 2019 ರವರೆಗೆ ಫ್ಲವರ್, ಪಾಕ್ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.ಜಿಂಬಾಬ್ವೆ ತಂಡ ಮಾಜಿ ಆಟಗಾರರಾಗಿರುವ ಗ್ರಾಂಟ್ ಫ್ಲವರ್, 67 ಟೆಸ್ಟ್ ಪಂದ್ಯ ಹಾಗೂ 221 ಏಕದಿನ ಪಂದ್ಯಗಳನ್ನಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post