ಬಾಗಲಕೋಟೆ : ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಕಾರಜೋಳ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಬಾಗಲಕೋಟೆ ಡಿಸಿ ಕ್ಯಾಪ್ಟನ್ ರಾಜೇಂದ್ರ ಸುದ್ದಿಗೋಷ್ಟಿ ನಡೆಸಿದ್ದಾರೆ.
ಜಿಲ್ಲಾದ್ಯಂತ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚಳವಾಗ್ತಿರೋ ಕಾರಣದಿಂದ ಜಿಲ್ಲಾಉಸ್ತುವಾರಿ ಸಚಿವ ಡಿಸಿಎಮ್ ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗಳಿಗೆ ಪತ್ರಬರೆದಿದ್ದಾರೆ. ಆ ಪತ್ರದಲ್ಲಿ ಜಿಲ್ಲೆಯಾದ್ಯಂತ ಮದುವೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಮದುವೆ ,ಸೀಮಂತ ಹಾಗೂ ಅಂತ್ಯ ಸಂಸ್ಕಾರ ಅವಾಂತರದಿಂದಲೇ 70 ಕ್ಕೂ ಹೆಚ್ಚು ಕೇಸ್ ಗಳು ಬಂದಿವೆ. ಕಲಾದಗಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಮದುವೆ, ಇಳಕಲ್ ಮದುವೆ, ಡಾಣಕಶಿರೂರ ಸೀಮಂತ, ಚಿಕ್ಕಮ್ಯಾಗೇರಿ ರೇಲ್ವೆಟಿಕೆಟ್ ಕಲೆಕ್ಟರ್ ಅಂತ್ಯಸಂಸ್ಕಾರಗಳಲ್ಲಿ ಕೊರೋನಾ ನಿಯಮ ಉಲ್ಲಂಘನೆ ಯಾಗಿರುವುದರಿಂದ, ಹೆಚ್ಚು ಕೇಸ್ಗಳು ದಾಖಲಾಗಿವೆ. ಹೀಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಮದುವೆಗಳಿಗೆ ಪರವಾನಗಿ ನೀಡುವಂತೆ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು ಡಿಸಿಎಮ್ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಮದುವೆ, ಸೀಮಂತ ಕಾರ್ಯನಿಷೇಧ ಮಾಡಲಾಗಿದೆ, ಮದುವೆಯಾಗುವವರು ಕೇವಲ ನೊಂದಣಾಧಿಕಾರಿ ಕಚೇರಿಗಳಲ್ಲಿ ಮಾತ್ರ ಮಾಡಿಕೊಳ್ಳಬೇಕು, ಯಾರೇ ಮರಣ ಹೊಂದಿದರು ತಾಲ್ಲಾಡಳಿತದ ಗಮನಕ್ಕೆ ತರಬೇಕು, ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು,ಎಂದಿದ್ದಾರೆ. ಹಾಗೂ ಜಮಖಂಡಿ ತಾಲ್ಲೂಕಾ ಆರೋಗ್ಯಾಧಿಕಾರಿಗೆ ಕೊರೊನಾ ತಗುಲಿರುವ ವಿಷಯತಿಳಿಸಿದ ಅವರ ಹಿಪ್ಪರಗಿಯಲ್ಲಿ ಕೋವಿಡ್ ನಿಂದ ವೃದ್ದೆ ಮೃತಪಟ್ಟಿದ್ದಳು, ಅಲ್ಲಿ ತಾಲ್ಲೂಕಾ ಆರೋಗ್ಯಾಧಿಕಾರಿ ಹೋದ ಪರಿಣಾಮ ಕೊರೊನಾ ತಗುಲಿರುವ ಶಂಕೆ ಇದೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post