ಸಾಮಾನ್ಯ ಜನರ ಸಾಧನೆಯನ್ನು ಪ್ರಶಂಸಿಸುವಲ್ಲಿ ಉದ್ಯಮಿ ಆನಂದ್ ಮಹೀಂದ್ರ ಸದಾ ಮುಂಚೂಣಿಯಲ್ಲಿರ್ತಾರೆ. ಈ ಬಾರಿ ಕೊರೋನಾ ವಿರುದ್ಧ ಹೋರಾಡುವ ಒಂದಿಷ್ಟು ಸಲಹೆ, ಸೂಚನೆಗಳಿರುವ ಹಾಗೂ ಸೂಕ್ತ ಕ್ರಮಗಳಿಂದ ನವೀಕರಣಕೊಂಡಿರುವ ಆಟೋ ರಿಕ್ಷಾವನ್ನು ಹಾಡಿ ಹೊಗಳಿದ್ದಾರೆ. ಮುಂಬೈನ ಸತ್ಯವಾನ್ ಗಿತೆ ಅನ್ನೋರು ತಮ್ಮ ಆಟೋದಲ್ಲಿ ಹಲವು ಸುಸಜ್ಜಿತ ವ್ಯವಸ್ಥೆಗಳನ್ನ ಮಾಡಿದ್ದಾರೆ.. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಂತೆ ಆನಂದ್ ಮಹೀಂದ್ರಾ ಕೂಡ ಆಟೋ ಮಾಲೀಕನ ಕಳಕಳಿಯನ್ನ ಮೆಚ್ಚಿದ್ದಾರೆ.
ಒಂದು ಪುಟ್ಟ ಮನೆಯಂತಿರುವ ಹಾಗೂ ಎಲ್ಲಾ ಸೌಲಭ್ಯಗಳನ್ನ ಒಳಗೊಂಡಿರುವ ಸತ್ಯವಾನ್ರವರ ಆಟೋವನ್ನು, ಮುಂಬೈನ ಮೊದಲ ‘ಹೋಂ ಸಿಸ್ಟಮ್ ಆಟೋ’ ಎಂದು ಕರೆಯಲಾಗಿದೆ. ಹೈಟೆಕ್ ವ್ಯವಸ್ಥೆ ಹೊಂದಿರೋ ಈ ಆಟೋದಲ್ಲಿ Wi-Fi ಸೇವೆ, ಸ್ಮಾರ್ಟ್ ಫೋನ್ ಚಾರ್ಚಿಂಗ್, ಮೊಬೈಲ್ ಮೂಲಕ ಕನೆಕ್ಟ್ ಆಗಿರುವ ಟಿವಿ, ಬ್ಲೂಟೂತ್ ಸ್ಪೀಕರ್ಸ್, ಶುದ್ಧವಾದ ಕುಡಿಯುವ ನೀರು ಮತ್ತು ಪೋರ್ಟೆಬಲ್ ಫ್ಯಾನ್ ಜೋಡಣೆಯ ವ್ಯವಸ್ಥೆ ಇದೆ.
ಜೊತೆಗೆ ಪುಟ್ಟ ಸಿಂಕ್ನಿಂದ ಹಿಡಿದು, ಎರಡು ಚಿಕ್ಕ ಮಣ್ಣಿನ ಕುಂಡಗಳು, ಹ್ಯಾಂಡ್ವಾಶ್ ಸೋಪ್ ಹಾಗೂ ಸ್ಯಾನಿಟೈಸ್ ಕೂಡ ಆಟೋದಲ್ಲಿ ಇಟ್ಟಿದ್ದಾರೆ. ಅಲ್ಲದೇ ಆಟೋದ ಹೊರಗಿನ ಭಾಗವನ್ನ ಕೊರೋನಾ ಬಗ್ಗೆ ಅರಿವು ಮೂಡಿಸುವುದಕ್ಕೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದವನ್ನು ಸಲ್ಲಿಸುವುದಕ್ಕೆ ಉಪಯೋಗಿಸಿಕೊಂಡಿದ್ದಾರೆ.
ಇಷ್ಟೆಲ್ಲಾ ಆಟೋದಲ್ಲಿ ಅಳವಡಿಸಿಕೊಂಡಿರುವ ಮಾಲಿಕ ಸತ್ಯವಾನ್.. ಕೆಲವು ಉಚಿತ ಸೇವೆಯನ್ನೂ ನೀಡುತ್ತಿದ್ದಾರೆ. ವಯೋವೃದ್ಧರಿಗೆ ಒಂದು ಕಿಲೋಮೀಟರ್ವರೆಗೂ ಉಚಿತ ಪ್ರಯಾಣ ಮತ್ತು ನವದಂಪತಿಗೆ ಪೂರ್ತಿ ಉಚಿತ ಪ್ರಯಾಣ ಸಿಗಲಿದೆ. ಈ ಆಟೋದಲ್ಲಿ ಮಾಡಿರುವ ವ್ಯವಸ್ಥೆಗೆ ಮೆಚ್ಚಿದ ಆನಂದ್ ಮಹೀಂದ್ರಾ.. ತಮ್ಮ ಟ್ವಿಟರ್ನಲ್ಲಿ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ.
One silver lining of Covid 19 is that it’s dramatically accelerating the creation of a Swachh Bharat…!! pic.twitter.com/mwwmpCr5da
— anand mahindra (@anandmahindra) July 10, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post