ಮುಂಬೈ: ಮೊದಲೇ ಕೊರೊನಾ ಹಾವಳಿಯಿಂದ ಮುಂಬೈ ತತ್ತರಿಸಿದೆ. ಇದರ ಮಧ್ಯೆ ವ್ಯಕ್ತಿಯೊಬ್ಬನಿಂದ ಬಂದ ಫೇಕ್ ಕಾಲ್, ಹಲವಾರು ಮುಂಬೈ ಜನರ ನಿದ್ದೆಗೆಡಿಸಿದೆ.
‘ರಿಷಿ’ ಎಂಬ ವ್ಯಕ್ತಿ ಹಲವಾರು ಮುಂಬೈ ನಿವಾಸಿಗಳಿಗೆ ಫೋನ್ ಮಾಡಿ, ನಾನು ಕೊಲೆಯೊಂದನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದೀನಿ. ಕೊಲೆಗಾರ ನನ್ನ ಬೆನ್ನಟ್ಟಿದ್ದಾನೆ.. ಕಾಪಾಡಿ.. ಎಂದು ಹೇಳಿದ್ದಾನೆ. ಇದರಿಂದ, ಆತಂಕಗೊಂಡ ಜನರು ಪೋಲಿಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ‘140’ ಮತ್ತು ‘40’ ಸಂಖ್ಯೆಗಳಿಂದ ಪ್ರಾರಂಭವಾಗೋ ಸಂಖ್ಯೆಯಿಂದ ಇಂಥ ಕರೆಗಳು ಬಂದಿವೆ. ಇದರ ಮೂಲವನ್ನು ಹುಡುಕಿಹೋದಾಗ ಸಂತ್ಯಾಶ ಬಯಲಾಗಿದೆ.
ಇದು SONY LIVನ ‘ಅನ್ದೇಖಿ’ ಎನ್ನುವ ಹೊಸ ವೆಬ್ ಸೀರೀಸ್ನ ಪ್ರಚಾರಕ್ಕಾಗಿ ಮಾಡಿದ ಪ್ರ್ಯಾಂಕ್ ಕಾಲ್ ಎಂದು ತಿಳಿದುಬಂದಿದೆ. ಜನರಲ್ಲಿ ಆತಂಕ ಮೂಡಿಸುತ್ತಿರೋ ಈ ಪ್ರಚಾರಕಾರ್ಯ ಚಟುವಟಿಕೆಯನ್ನು ಕೂಡಲೇ ನಿಲ್ಲಿಸಬೇಕೆಂದು ಪೋಲಿಸರು ಆದೇಶಿಸಿದ್ದಾರೆ.
ಮುಂಬೈ ಪೋಲಿಸರ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ ಈ ಘಟನೆ ಬಗ್ಗೆ ಹಲವಾರು ಮಂದಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಯಿಸಿರೋ ಪೋಲಿಸರು, ಸಾರ್ವಜನಿಕರು ಅಂತಹ ಕರೆಗಳಿಗೆ ಮಣಿದು ವಯ್ಯಕ್ತಿಕ ಮಾಹಿತಿಗಳನ್ನು ಕೊಡಬಾರದೆಂದು ಮತ್ತು ಕೂಡಲೇ ಸ್ಥಳೀಯ ಪೋಲಿಸ್ ಠಾಣೆಗೆ ತಿಳಿಸಬೇಕೆಂದು ಕೋರಿದೆ.
ಹೊಸ ಕಾರ್ಯಕ್ರಮದ ಪ್ರಚಾರಕ್ಕೆಂದು ಮಾಡಿದ ಕರೆಗಳು ಬಹುತೇಕ ಜನರಿಗೆ ಭೀತಿ ಹುಟ್ಟಿಸಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾದ ಕಾರಣ ಕ್ಷಮೆಯಾಚಿಸುತ್ತೇವೆ ಎಂದು SONY LIV ತಿಳಿಸಿದೆ.
The era of ‘any publicity is good publicity’ is a passé. Any publicity creating panic amongst citizens and suggesting a threat to their security will be dealt with necessary severity. Hope the fake calls for promotions aren’t bothering you any longer, Mumbaikars #SoNotDone
— Mumbai Police (@MumbaiPolice) July 10, 2020
SonyLIV deeply regrets the recent promotional test activity for its show “Undekhi” which has caused anguish to some people. Our intention was never to cause distress to anyone. We sincerely regret any inconvenience caused and offer our apologies @MumbaiPolice @MahaCyber1
— SonyLIV (@SonyLIV) July 11, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post