ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದು ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ರು. ಐತಿಹಾಸಿಕ ಕ್ಷಣವನ್ನ ಇಡೀ ದೇಶವೇ ಕಣ್ತುಂಬಿಕೊಂಡಿದೆ. ಜೊತೆಗೆ ವಿದೇಶಗಳಲ್ಲಿರುವ ಭಾರತೀಯರೂ ಕೂಡ ಜೈರಾಮ್ ಅನ್ನೋ ಘೋಷಣೆಯನ್ನ ಮೊಳಗಿಸಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಸುಂದರ ಕ್ಷಣಗಳ ಪ್ರಮುಖ ಕೇಂದ್ರ ಬಿಂದುವಾಗಿದ್ದು ಪ್ರಧಾನಿ ಮೋದಿ.
ಪ್ರಧಾನಿ ಮೋದಿ ರಾಮನ ಜನ್ಮಭೂಮಿಗೆ ಬಂದು ಭಾರತೀಯರ ಶತಮಾನಗಳ ಕನಸುಗಳನ್ನ ಈಡೇರಿಸುತ್ತಿರುವ ಶುಭ ಗಳಿಗೆಯನ್ನ ಕಣ್ತುಂಬಿಕೊಳ್ಳೋದನ್ನ ಅವರ ತಾಯಿ ಹೀರಾಬೆನ್ ಕೂಡ ಮರೆಯಲಿಲ್ಲ. ಅತ್ತ ತಮ್ಮ ಸುಪುತ್ರ ಭೂಮಿ ಪೂಜೆಯನ್ನ ನೆರವೇರಿಸುತ್ತಿದ್ರೆ, ಇತ್ತ ಹಿರಿಯ ಜೀವ ಹೀರಾಬೆನ್ ಮನೆಯಲ್ಲಿರುವ ಟಿವಿ ಮುಂದೆ ಕೂತು ಭಾವುಕರಾದ್ರು.
ಭೂಮಿ ಪೂಜೆಯ ನೇರ ಪ್ರಸಾರವನ್ನ ನೋಡುತ್ತ ಭಕ್ತಿಯಿಂದ ಕೈಮುಗಿದು ಕುಳಿತುಕೊಂಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಹಿರಾಬೆನ್ ಕೇವಲ ಭೂಮಿ ಪೂಜೆಯನ್ನ ಮಾತ್ರ ವೀಕ್ಷಿಸಿಲ್ಲ, ಇಂದು ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದ ಸಂಪೂರ್ಣ ದೃಶ್ಯವನ್ನ ಕಣ್ತುಂಬಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post