ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದಾರೆ. ದೇಶದ ವಿವಿಧ ಮೂಲೆಗಳಿಂದ ಭಕ್ತರು ಕಳಿಸಿದ್ದ 9 ಇಟ್ಟಿಗೆಗಳನ್ನಿಟ್ಟು ಪ್ರಧಾನಿ ಭೂಮಿ ಪೂಜೆ ನೆರವೇರಿಸಿದರು. ಅತ್ತ ನ್ಯೂಯಾರ್ಕ್ನ ಟೈಮ್ಸ್ಕ್ವೇರ್ನಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಂಮದಿರದ ಮಾದರಿಯನ್ನು ಪ್ರದರ್ಶಿಸಲಾಗಿದೆ.
ರಾಮಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯನ ಕನಸಾಗಿದ್ದು, ವಿಶ್ವದ ಮೂಲೆಯಲ್ಲಿನ ಭಾರತೀಯರು ಇಂದು ಸಂಭ್ರಮಿಸಿದ್ದಾರೆ. ಇನ್ನು ಅಮೆರಿಕದಲ್ಲೂ ರಾಮನ ಜಪ ನಡೆದಿದ್ದು, ಕರ್ನಾಟಕದ ವಿಹಿಂಪ ಮುಖಂಡ ಶಿವರಾಮ್ ತಂಡ ವೈಟ್ ಹೌಸ್ ಸಮೀಪ ರಥಯಾತ್ರೆ ನಡೆಸಿ ಸಂಭ್ರಮಪಟ್ಟಿದೆ. ಭಗವಾಧ್ವಜ ಹಿಡಿದು ಕಾರ್ಯಕರ್ತರು ಪಾದಯಾತ್ರೆ ನಡೆಸಿ ಶ್ರೀರಾಮನಿಗೆ ಜೈಕಾರ ಹಾಕಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post