ಅಹಮದಾಬಾದ್: ಜನಪ್ರಿಯ ಆಧ್ಯಾತ್ಮಿಕ ಚಿಂತಕ ಮೊರಾರಿ ಬಾಬು ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬರೋಬ್ಬರಿ 18.61 ಕೋಟಿ ರೂಪಾಯಿಗಳನ್ನ ಸಂಗ್ರಹಿಸಿದ್ದಾರೆ. ರಾಮ ಮಂದಿರಕ್ಕಾಗಿ ಕನಿಷ್ಠ 5 ಕೋಟಿಯಾದರೂ ಹಣ ಸಂಗ್ರಹಿಸುವಂತೆ ಮೊರಾರಿ ಬಾಪು ಮನವಿ ಮಾಡಿದ್ದರು.
ಮೊರಾರಿ ಬಾಪುರ ಮನವಿಯಂತೆ ಅವರ ಅನುಯಾಯಿಗಳು ದೇಶ ಹಾಗೂ ವಿದೇಶಗಳಿಂದ ಬರೋಬ್ಬರಿ 18.61 ಕೋಟಿ ರೂಪಾಯಿ ಹಣವನ್ನ ಸಂಗ್ರಹಿಸಿದ್ದಾರೆ. ಇಷ್ಟು ಹಣದಲ್ಲಿ ಬರೋಬ್ಬರಿ 11.30 ಕೋಟಿ ಹಣವನ್ನ ಭಾರತದೊಳಗೆ ಸಂಗ್ರಹಿಸಲಾಗಿದ್ದು, ಅದನ್ನ ಇಂದು ರಾಮ ಮಂದಿರ ಟ್ರಸ್ಟ್ಗೆ ಹಸ್ತಾಂತರ ಮಾಡಲಾಗಿದೆ. ಇನ್ನು 3.21 ಕೋಟಿ ಹಣವನ್ನ ಲಂಡನ್ನಲ್ಲಿ ಸಂಗ್ರಹ ಮಾಡಿದ್ದರೆ, 4.10 ಕೋಟಿ ಹಣವನ್ನ ಅಮೆರಿಕ ಮತ್ತು ಕೆನಡಾದಿಂದ ಹರಿದು ಬಂದಿದೆ. ಈ ಎಲ್ಲಾ ಹಣವನ್ನ ಮಂದಿರದ ಟ್ರಸ್ಟ್ಗೆ ಕೊಡಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post