ದೇಶದ ಕೋಟ್ಯಂತರ ಭಕ್ತರ ಕನಸು ಇಂದು ನನಸಾಗಿದೆ. ಅಯೋಧ್ಯೆಯನ್ನ ನೋಡಿದ್ರೆ, ತ್ರೇತಾಯುಗವೇ ಮತ್ತೆ ಮೈದಳೆದಂತಿದೆ. ಎತ್ತ ನೋಡಿದ್ರು ರಾಮ ಜಪ. ರಾಮನಾಮ ಸ್ಮರಣೆ. ಪ್ರಧಾನಿ ಮೋದಿ 40 ಕೆಜಿ ಬೆಳ್ಳಿ ಇಟ್ಟಿಗೆ ಇಟ್ಟು ಭೂಮಿ ಪೂಜೆ ನಡೆಸಿ ಅದ್ಧೂರಿ ಇತಿಹಾಸಕ್ಕೆ ಮುನ್ನುಡಿ ಬರೆದಾಗಿದೆ. ಇಡೀ ವಿಶ್ವ ಸಂಭ್ರಮದ ಕಡಲಲ್ಲಿ ತೇಲಾಡ್ತಾ ಇದೆ. ಇದೆಲ್ಲದ್ರ ನಡುವೆ ಆ ಒಂದು ಫ್ಯಾಮಿಲಿ ಮಾತ್ರ ಸಂತಸದ ಕ್ಷೀರ ಸಾಗರದಲ್ಲೇ ಮುಳುಗಿದೆ.
ರಾಮ ಮಂದಿರ ನಿರ್ಮಾಣಕ್ಕೆ ಅದೆಷ್ಟೋ ಕುಟುಂಬಗಳು ಶ್ರಮಿಸ್ತಾ ಇದ್ದಾವೆ. ಆದ್ರೆ ನಾವಿವತ್ತು ನಿಮಗೆ ಹೇಳೋ ಫ್ಯಾಮಿಲಿ ಮಾತ್ರ ಸ್ವಲ್ಪ ಜಾಸ್ತಿ ವಿಶೇಷ. ಆ ಫ್ಯಾಮಿಲಿ ಮತ್ಯಾವುದು ಅಲ್ಲಾ ಅಹಮದಬಾದ್ನಲ್ಲಿ ನೆಲೆಸಿರೋ ಸೊಂಪುರಸ್ ಫ್ಯಾಮಿಲಿ.
ಸೊಂಪುರಸ್ ಫ್ಯಾಮಿಲಿ ಯಾಕೆ ವಿಶೇಷ ಅಂದ್ರೆ, ಇವ್ರು ವಾಸ್ತುಶಿಲ್ಪವನ್ನ ನೆಚ್ಚಿಕೊಂಡು ಬದುಕಿದವ್ರು. ಬರೋಬ್ಬರಿ 30 ವರ್ಷಗಳಿಂದ ರಾಮಮಂದಿರ ನಿರ್ಮಾಣಕ್ಕಾಗಿ, ಹೋರಾಟದಲ್ಲಿ ತೊಡಗಿಸಿಕೊಂಡವ್ರು. ರಾಮಮಂದಿರದ ವಾಸ್ತುಶಿಲ್ಪ ಫೈನಲ್ ಮಾಡಿರೋರು ಇವರೇ.
ಹೌದು, 30 ವರ್ಷಗಳಿಂದ ರಾಮಮಂದಿರ ನಿರ್ಮಾಣಕ್ಕಾಗಿ ನಡೀತಾ ಇರೋ ಹೋರಾಟ ಹಾಗೂ ವಾಸ್ತಶಿಲ್ಪ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 90 ರದಶಕದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನ್ಯಾಯಾಂಗದಲ್ಲಿ ಪ್ರಕರಣವನ್ನು ತಡೆ ಹಿಡಿದಿದ್ರು. ಆ ಸಂದರ್ಭದಿಂದ ಹಿಡಿದು 2019ರವರೆಗೆ ರಾಮಮಂದಿರ ನಿರ್ಮಾಣ ಆಗುತ್ತೆ ಅನ್ನೋ ಭರವಸೆಯನ್ನ ಕಳೆದುಕೊಂಡಿದ್ರು. ಆದ್ರೆ ಯಾವಾಗ 2019 ರಲ್ಲಿ ಮಂದಿರ ನಿರ್ಮಾಣ ಮಾಡಿ ಅಂತಾ ಒಪ್ಪಿಗೆ ಸಿಕ್ತೋ ಅಂದಿನಿಂದ ಇಂದಿನವರೆಗೂ ಈ ಕುಟುಂಬ ಮತ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.
49 ವರ್ಷದ ಆಶಿಶ್ ಸೊಂಪೂರ ತಿಳಿಸೋ ಪ್ರಕಾರ, ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗಿನಿಂದ ರಾಮಮಂದಿರ ನಿರ್ಮಾಣದ ಬಗ್ಗೆ ಇಂಚಿಂಚೂ ಮಾಹಿತಿಯನ್ನ ಪಡೀತಾ ಇದ್ರು ಅಂದಿದ್ದಾರೆ.
ಇನ್ನು ಮಂದಿರ ನಿರ್ಮಾಣದ ವಿಚಾರವಾಗಿ 1990 ರಲ್ಲಿ ಒಟ್ಟು 4- ರಿಂದ 5 ವಿನ್ಯಾಸ ಪ್ಲ್ಯಾನ್ಗಳನ್ನ ನೀಡಲಾಗಿತ್ತು. ಇನ್ನು ಸೊಂಪುರಸ್ ಕುಟುಂಬ ಹೊಸ ವಿನ್ಯಾಸವನ್ನ ಕಳೆದ ತಿಂಗಳು ನೀಡಿತ್ತು. ಆದ್ರೆ ಈಗ ಅದಕ್ಕಿಂತ ಎರಡು ಪಟ್ಟು ಹೆಚ್ಚು ವಿನ್ಯಾಸ ಹೊಂದಿರೋ ಪ್ಲ್ಯಾನ್ನ ಪ್ರಸ್ತುತ ಪಡಿಸಿದ್ದಾರೆ. ಈ ಮೊದಲು ಚಂದ್ರಕಾಂತ್ ಸೊಂಪುರ ಕುಟುಂಬದ ಹಿರಿಯ ವಾಸ್ತುಶಿಲ್ಪಗಾರ, ರಾಮ ಮಂದಿರದ ವಿನ್ಯಾಸ ಬೇರೆ ದೇವಸ್ಥಾನಗಳು ಮಾಮೂಲಾಗಿ ಹೇಗಿರುತ್ವೋ ಅದೇ ರೀತಿ ಪ್ಲ್ಯಾನ್ ರೆಡಿ ಮಾಡಿದ್ರಂತೆ. ಆದ್ರೆ ಹಲವಾರು ವಿವಾದಗಳನ್ನು ಗಮನಿಸಿದ ನಂತರ, ಮಂದಿರದ ವಿನ್ಯಾಸವನ್ನ ಬದಲಾಯಿಸಿದ್ರು ಎನ್ನಲಾಗ್ತಿದೆ.
ಚಂದ್ರಕಾಂತ್ ಸೊಂಪುರ ಅವ್ರಿಗೆ 78 ವರ್ಷ ವಯಸ್ಸು. ಹೀಗಾಗಿ ಅವ್ರ ಮಕ್ಕಳಾದ ಆಶಿಶ್ ಹಾಗೂ ನಿಖಿಲ್ ಸೊಂಪುರ ಮಂದಿರ ನಿರ್ಮಾಣ ಕಾರ್ಯವನ್ನ ಮುಂದುವರೆಸ್ತಾ ಇದ್ದಾರೆ. ಚಂದ್ರಕಾಂತ್ ಹೇಗೆ ಮಾಡ್ಬೇಕು ಅನ್ನೋದ್ರ ಬಗ್ಗೆ ಮಾಹಿತಿಯನ್ನ ನೀಡ್ತಾನೆ ಇರ್ತಾರೆ.
ಸೊಂಪುರಸ್ ಕುಟುಂಬ ಮೂಲತಃ ಪಾಲಿಟಾನ ಪ್ರದೇಶದವ್ರಾಗಿದ್ದು, ನಂತರ ಅಹಮದಬಾದ್ಗೆ ಶಿಫ್ಟ್ ಆಗಿದ್ರು. ಮಂದಿರ ನಿರ್ಮಾಣ ಕಾರ್ಯಕ್ಕಾಗಿ, ಉತ್ಪಾದನೆ ಮತ್ತು ಹಣಕಾಸು ಸೇವೆಗಳ ಸಂಘಟನೆ ಎಲ್ಲಾ ನಾಗರಿಕ ಕಾರ್ಯಗಳನ್ನ ಮತ್ತು ನಿರ್ಮಾಣ ಕಾರ್ಯವನ್ನು ನಿರ್ವಹಿಸಿಲಿದೆ. ಇವ್ರ ಜೊತೆಯೆ ಸೊಂಪುರಸ್ ಕುಟಂಬ ಕೂಡ ಕೆಲಸ ಮಾಡ್ತಿದೆ.
ಸೊಂಪುರಸ್ ಫ್ಯಾಮಿಲಿಯವ್ರು ತಿಳಿಸೋ ಪ್ರಕಾರ, ರಾಮ ಮಂದಿರವನ್ನ ಹೊರತು ಪಡಿಸಿ ಭಾರತ ಹಾಗೂ ವಿದೇಶಗಳಲ್ಲಿ 200 ಕ್ಕೂ ಹೆಚ್ಚು ದೇವಾಲಯಗಳನ್ನ ನಿರ್ಮಾಣ ಮಾಡಿದ್ದಾರೆ. ರಾಮಮಂದಿರ ನಿರ್ಮಾಣದ ವಿಚಾರವಾಗಿ 1989-90ರಲ್ಲೇ ಚಂದ್ರಕಾಂತ್ ಸೊಂಪುರ ಅವ್ರನ್ನ ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥರು ಸಂಪರ್ಕ ಮಾಡಿ ದೆಹಲಿಗೆ ಕರೆದುಕೊಂಡು ಬರುವಂತೆ ತಿಳಿಸಿದ್ದರಂತೆ. ಮಂದಿರ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿ, ಭೂಮಿಯನ್ನ ಹಿಂಪಡೆಯೋದಕ್ಕೆ ಅಯೋಧ್ಯೆಗೆ ತೆರಳಿದ್ರಂತೆ. ಆದ್ರೆ ಅಲ್ಲಿನ ಬಿಗಿ ಭದ್ರತೆಯಿಂದ, ಚಂದ್ರಕಾಂತ್ ಅವ್ರು ಭಕ್ತನಂತೆ ವೇಷ ಧರಿಸಿ, ತನ್ನ ಹೆಜ್ಜೆಗಳಿಂದಲೇ ಭೂಮಿಯನ್ನ ಅಳೆದ್ರು ಎನ್ನಲಾಯ್ತು.
ಸೋಂಪುರಸ್ ಕುಟುಂಬದ ವಾಸ್ತುಶಿಲ್ಪದ ಬಗ್ಗೆ ಈ ಮೆಚ್ಚುಗೆ ವ್ಯಕ್ತವಾಗಿದ್ದು, ಅಂದುಕೊಂಡಂತೆ ದೇಗುಲ ನಿರ್ಮಿಸೋ ಜವಾಬ್ದಾರಿ ನಮ್ಮ ಮೇಲಿದೆ ಅನ್ನುತ್ತೆ ಈ ಕುಟುಂಬ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post