ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಮೋಹಕ ತಾರೆ ನಟಿ ರಮ್ಯಾ ಇತ್ತೀಚೆಗೆ ಫೇಸ್ಬುಕ್ನಲ್ಲಿ ಮತ್ತೆ ಌಕ್ಟಿವ್ ಆಗಿದ್ದಾರೆ. ಈ ಹಿಂದೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ರಮ್ಯಾ ಆಗಾಗ ಏನಾದ್ರೂ ಪೋಸ್ಟ್ ಮಾಡ್ತಾನೇ ಇದ್ರು. ಆದ್ರೆ ಕಳೆದೊಂದು ವರ್ಷದಿಂದ ರಮ್ಯಾ ಸೋಷಿಯಲ್ ಮಿಡಿಯಾದಿಂದ ದೂರ ಉಳಿದಿದ್ರು. ಇದೀಗ ಅಯೋಧ್ಯೆ ರಾಮ ಮಂದಿರದ ಕುರಿತು ರಮ್ಯಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
“ರಾಮ ಮಂದಿರ ನಿರ್ಮಾಣವಾಗ್ತಿರೊದ್ರಿಂದ ಹಿಂದೂಗಳು ಆನಂದದಲ್ಲಿದ್ದಾರೆ.. ಇದರಿಂದ ನನಗೂ ಸಂತೋಷವಾಗಿದೆ. ಮಸೀದಿ ನಿರ್ಮಾಣ ಕಾರ್ಯ ಆರಂಭವಾದ ಬಳಿಕ ಮುಸ್ಲಿಮರು ಆನಂದ ಪಡುತ್ತಾರೆ. ಆಗಲೂ ನಾನು ಸಂತೋಷ ಪಡುತ್ತೇನೆ. ನಾವು ಆನಂದವಾಗಿರಲು ಮತ್ತು ದೇವರನ್ನು ಕಾಣಲು ಮಂದಿರ ಅಥವಾ ಮಸೀದಿ ಅಗತ್ಯವಿಲ್ಲ ಎಂದು ಎಲ್ಲರೂ ತಿಳಿದಾಗ ನನಗೆ ಅತ್ಯಂತ ಹೆಚ್ಚು ಸಂತೋಷವಾಗುತ್ತೆ. ಐಕ್ಯತೆ, ಏಕತೆ ಮತ್ತು ಒಗ್ಗಟ್ಟಿನಿಂದ ಇರುವಲ್ಲಿ ನಿಜವಾದ ಸಂತೋಷವಿದೆ. ಬಾಹ್ಯವಾಗಿರೋದನ್ನು ನಿರ್ಲಕ್ಷಿಸಿ.. ಆಂತರ್ಯದಲ್ಲಿ ನೋಡಿರಿ.. ಅಲ್ಲಿ ನಿಮ್ಮ ನಿಜವಾದ ದೇವರು ಕಾಣುತ್ತಾನೆ.. ಅಲ್ಲಿ ನಿಜವಾದ ನೀವು ಇದ್ದೀರಿ -ರಮ್ಯಾ, ನಟಿ
ಬಹಳ ದಿನಗಳ ನಂತರ ಫೇಸ್ಬುಕ್ ಪೋಸ್ಟ್ ಮಾಡಿರುವ ರಮ್ಯಾ ಸಾಮರಸ್ಯದ ಸಂದೇಶ ನೀಡಿದ್ದಾರೆ. ಜೊತೆಯಾಗಿ ದೇವರು ನಿಮ್ಮೊಳಗೇ ಇದ್ದಾನೆ.. ಅನ್ನೋ ಮಾತನ್ನೂ ಹೇಳಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post