ಈ ವರ್ಷದ ಕ್ರಿಕೆಟ್ ಕ್ಯಾಲೆಂಡರ್ನಲ್ಲಿ ಕ್ರಿಕೆಟ್ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದ ಟೂರ್ನಿ ಐಪಿಎಲ್ಗೆ ದಿನಗಣನೆಗೆ ಶುರವಾಗಿದೆ. ಟಿ20 ಲೀಗ್ಗಳಲ್ಲಿ ರಿಚ್ಚೆಸ್ಟ್ ಟೂರ್ನಿಯಾಗಿರುವ ಐಪಿಎಲ್ 12 ಆವೃತ್ತಿಗಳನ್ನ ಯಶಸ್ವಿಯಾಗಿ ಮುಗಿಸಿದೆ. 2008ರಲ್ಲಿ ಆರಂಭವಾದ ಐಪಿಎಲ್ ವಿಶ್ವದಲ್ಲೇ ಮೋಸ್ಟ್ ಪಾಪ್ಯುಲರ್ ಟಿ20 ಲೀಗ್ ಆಗಿ ಬೆಳೆದಿದೆ. ಈ ಕಲರ್ಫುಲ್ ಟೂರ್ನಿಯಲ್ಲಿ ಹಿರಿಯ ಹಾಗೂ ಕಿರಿಯ ಆಟಗಾರರು ಪಾಲ್ಗೊಳ್ಳುವುದು ಟೂರ್ನಿಗೆ ಮತ್ತಷ್ಟು ಮೆರಗು ನೀಡುತ್ತೆ. ಮತ್ತೊಂದು ಹೆಚ್ಚು ರನ್ ಸ್ಕೋರರ್ಗೆ ಆರೆಂಜ್ ಕ್ಯಾಪ್, ಹೆಚ್ಚು ವಿಕೆಟ್ ಬೇಟೆಗಾರನಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತೆ. ಈ ಕಿರೀಟಗಳನ್ನ ತಲೆಯ ಮೇಲಿಟ್ಟುಕೊಳ್ಳುಲು ಹಿರಿಯ & ಕಿರಿಯ ಆಟಗಾರರು ನಾ.. ಮುಂದು, ತಾ.. ಮುಂದು ಅಂತಾ ಅಂಗಳದಲ್ಲಿ ಕಾದಾಡುತ್ತಾರೆ. ಐಪಿಎಲ್ನ ತಂಡಗಳು ಕೂಡ ಮಿಲಿಯನ್ ಡಾಲರ್ ಟೂರ್ನಿಯ ಕಿರೀಟ ಮುಡಿಗೇರಿಸಿಕೊಳ್ಳಲು ರಣರಂಗದ ಕಲಿಗಳಂತೆ ಹೋರಾಡುತ್ತವೆ. ಹಾಗಾದ್ರೆ, ಇದುವರೆಗೆ ನಡೆದ 12 ಐಪಿಎಲ್ ಆವೃತ್ತಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನ ಗೆದ್ದಿದೆ. ಯಾವ ತಂಡದ ರ್ಯಾಕಿಂಗ್ ಏನು, ತಂಡಗಳ ಸರಾಸರಿ ಏನು? ಇಲ್ಲಿದೆ ಸಂಪೂರ್ಣ ವಿವರ.
1. ಚೆನ್ನೈ ಸೂಪರ್ ಕಿಂಗ್ಸ್
ಒಟ್ಟು ಪಂದ್ಯ 165
ಗೆಲುವು 100
ಸೋಲು 63
ರದ್ದು 2
ಸರಾಸರಿ 61.28
ಱಂಕ್ 1
2. ಮುಂಬೈ ಇಂಡಿಯನ್ಸ್
ಒಟ್ಟು ಪಂದ್ಯ 187
ಗೆಲುವು 107
ಸೋಲು 78
ರದ್ದು 2
ಸರಾಸರಿ 57.75
ಱಂಕ್ 2
3. ಸನ್ ರೈಸರ್ಸ್ ಹೈದ್ರಾಬಾದ್
ಒಟ್ಟು ಪಂದ್ಯ 108
ಗೆಲುವು 57
ಸೋಲು 49
ರದ್ದು 2
ಸರಾಸರಿ 53.70
ಱಂಕ್ 3
4. ಕೊಲ್ಕತ್ತಾ ನೈಟ್ ರೈಡರ್ಸ್
ಒಟ್ಟು ಪಂದ್ಯ 178
ಗೆಲುವು 92
ಸೋಲು 83
ಸರಾಸರಿ 52.52
ಱಂಕ್ 4
ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್ 5ನೇ ಸ್ಥಾನ ಪಡೆದುಕೊಂಡಿದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6, ಕಿಂಗ್ಸ್ ಇಲೆವೆನ್ ಪಂಜಾಬ್ 7 ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ 8ನೇ ಸ್ಥಾನ ಪಡೆದುಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post