ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರಿಗೆ ಕೋಟ್ಯಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ಟೀವಿ ಚಾನೆಲ್ ‘ಫಾಕ್ಸ್ ಸ್ಪೋರ್ಟ್ಸ್’ ವಿವಾದಾತ್ಮಕ ಹೇಳಿಕೆ ನೀಡಿ ಟ್ವಿಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.
‘ಫಾಕ್ಸ್ ಸ್ಪೋರ್ಟ್ಸ್’ ವಿರುದ್ಧ ಏಕೆ ಕಿಡಿಕಿಡಿ..?
ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಪಡೆ, ಆಸ್ಟ್ರೇಲಿಯ ಸರಣಿಗಾಗಿ ತೆರಳಲಿದೆ. ಸದ್ಯ ವಿರಾಟ್ ಕೊಹ್ಲಿ ಅಪ್ಪನಾಗುವ ಸಂತಸದಲ್ಲಿದ್ದಾರೆ. ಜನವರಿಯಲ್ಲಿ ವಿರುಷ್ಕಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಸಮಯದಲ್ಲಿ ಆಸ್ಟ್ರೇಲಿಯ – ಭಾರತ ನಡುವಿನ ಸರಣಿ ನಡೆಯಲಿದೆ. ಈ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿಯುವ ಸಾಧ್ಯತೆ ಇದೆ. ಈ ಬಗ್ಗೆ ಸರಣಿಯ ನೇರ ಪ್ರಸಾರಕ ಫಾಕ್ಸ್ ಸ್ಪೋರ್ಟ್ಸ್ ಟ್ವಿಟ್ಟರ್ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ವಿರಾಟ್ ಕೊಹ್ಲಿಗೆ ದೊಡ್ಡ ಖುಷಿಯ ಸುದ್ದಿ, ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಕಳವಳಕಾರಿ ಸಂಗತಿ’ ಎಂದು ತಿಳಿಸಿದೆ.
ಇದರ ವಿರುದ್ಧ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಫಾಕ್ಸ್ ಸ್ಪೋರ್ಟ್ಸ್ ವರ್ತನೆಯೇ ಸರಿ ಇಲ್ಲ, ಅವರಿಬ್ಬರ ಸಂತಸದ ಕ್ಷಣದಲ್ಲಿ ನಾವೆಲ್ಲರು ಭಾಗಿಯಾಗಬೇಕು, ಇಂತಹ ಸಮಯದಲ್ಲಿ ಯಾರೂ ಹಣ ಮತ್ತು ಕ್ರಿಕೆಟ್ ಆಸ್ಟ್ರೇಲಿಯದ ಮೇಲೆ ಆಗುವ ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ’ ಎಂದು ಫಾಕ್ಸ್ ಸ್ಪೋರ್ಟ್ಸ್ ವಿರುದ್ಧ ಟ್ವಿಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ರಾಷ್ಟ್ರಗಳು ಕೂಡ ಭಾರತದ ವಿರುದ್ಧ ಸರಣಿ ಆಡುವುದನ್ನು ಬಯಸುತ್ತವೆ. ಇದಕ್ಕೆ ಮೂಲ ಕಾರಣ ಭಾರತದ ವಿರುದ್ಧ ಆಡುವುದರಿಂದ ಸಿಗುವ ಆರ್ಥಿಕ ಲಾಭ, ಕೊರೊನಾದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯ ಭಾರೀ ನಷ್ಟ ಅನುಭವಿಸಿದೆ. ಭಾರತದ ವಿರುದ್ಧ ಸರಣಿ ಆಯೋಜಿಸುವುದಕ್ಕೆ ಅದು ಸಾಕಷ್ಟು ಕಸರತ್ತು ನಡೆಸಿದ್ದನ್ನು ಸ್ಮರಿಸಬಹುದು.
Virat Kohli has big news – and Cricket Australia could be VERY concerned.
MORE: https://t.co/c0AN7236yF pic.twitter.com/8izj6489iW
— Fox Cricket (@FoxCricket) August 27, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post