‘ಆದಿಪುರುಷ’ನಾಗಿ ಬರಲಿರೋ ಪ್ರಭಾಸ್ಗೆ ಠಕ್ಕರ್ ಕೊಡೋದಕ್ಕೆ ಸೈಫ್ ಅಲಿ ರೆಡಿ ಆಗ್ತಿದ್ದಾರಂತೆ. ಹೀಗಂತ ಖುದ್ದು ಪ್ರಭಾಸ್ ಅವರೇ ಹೇಳ್ತಿದ್ದಾರೆ. ಹೌದು..’ಆದಿಪುರುಷ’ ರಾಮನಿಗೆ ‘ಲಂಕೇಶ’ನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರಂತೆ.
ನಿರ್ದೇಶಕ ಓಂ ರಾವತ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಆದಿಪುರುಷ’ ಸಿನಿಮಾದಲ್ಲಿ ಆದಿಪುರುಷ ಪ್ರಭಾಸ್ಗೆ ವಿಲನ್ ಆಗಿ ಸೆಡ್ಡು ಹೊಡೆಯೋದಕ್ಕೆ ಸೈಫ್ ಎಲ್ಲಾ ತಯಾರಿಯನ್ನ ಮಾಡಿಕೊಳ್ತಿದ್ದಾರಂತೆ. ಈ ಕುರಿತು ನಟ ಪ್ರಭಾಸ್ ರಿವೀಲ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ‘7000 ವರ್ಷಗಳ ಹಿಂದೆ ವಿಶ್ವದ ಅತ್ಯಂತ ಬುದ್ಧಿವಂತ ರಾಕ್ಷಸ ಅಸ್ತಿತ್ವದಲ್ಲಿದ್ದ’ ಅಂತ ಬರೆದು ಸೈಫ್ ಅಲಿ ಖಾನ್ ಪಾತ್ರವನ್ನ ಇಂಟ್ರೊಡ್ಯೂಸ್ ಮಾಡಿದ್ದಾರೆ ಪ್ರಭಾಸ್. ಚಿತ್ರದಲ್ಲಿ ಸೈಫ್ ಪಾತ್ರದ ಹೆಸರು ‘ಲಂಕೇಶ್.’ ಪ್ರಭಾಸ್ ನಿನ್ನೆ ಕೂಡ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಕುತೂಹಲ ಕೆರಳಿಸಿದ್ದರು.
ಈಗಾಗಲೇ ಸೈಫ್ 2006ರಲ್ಲಿ ತೆರೆಕಂಡ ‘ಓಂಕಾರ್’ ಹಾಗೂ 2020ರ ‘ತಾನಾಜೀ’ ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಓಂ ರಾವತ್ ಜೊತೆ ಸೈಫ್ಗೆ ಇದು ಎರಡನೇ ಸಿನಿಮಾವಾಗಲಿದ್ದು, ಈ ಹಿಂದೆ ‘ತಾನಾಜೀ’ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿದ್ದರು. ‘ಲಂಕೇಶನ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಬಹಳ ಖುಷಿ ಇದೆ, ಥ್ರಿಲ್ ಆಗಿದ್ದೇನೆ’ ಅಂತ ಸೈಫ್ ಹೇಳಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post