ನವದೆಹಲಿ: ನಮ್ಮ ಸೇನೆಯು ಎಲ್‌ಎಸಿ ದಾಟಿ ಹೋಗಿಲ್ಲ. ಹಾಗೂ ಗುಂಡಿನ ದಾಳಿ ಸೇರಿದಂತೆ ಯಾವುದೇ ಆಕ್ರಮಣಕಾರಿ ಚಟುವಟಿಕೆ ನಡೆಸಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.
ನಿನ್ನೆ ರಾತ್ರಿ ಭಾರತದ ಸೈನಿಕರು ಎಲ್‌ಎಸಿ ದಾಟಿ ಪಾಂಗಾಂಗ್ ಸರೋವರದ ಬಳಿ ಬಂದು ಫೈರಿಂಗ್ ನಡೆಸಿದ್ರು ಎಂದು ಚೀನಾ ಗಂಭೀರ ಆರೋಪ ಮಾಡಿತ್ತು. ಇದನ್ನು ಭಾರತೀಯ ಸೇನೆ ತಳ್ಳಿಹಾಕಿದೆ. ಎಲ್ಎಸಿಯಲ್ಲಿ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಭಾರತ ಬದ್ಧವಾಗಿದೆ. ಆದ್ರೆ ಚೀನಾ ಪ್ರಚೋದನಕಾರಿ ಚಟುವಟಿಕೆಗಳನ್ನ ನಡೆಸುತ್ತಾ ಪರಿಸ್ಥಿತಿ ಉಲ್ಭಣಗೊಳ್ಳುವಂತೆ ಮಾಡ್ತಿದೆ. ಭಾರತೀಯ ಸೇನೆ ಯಾವುದೇ ಹಂತದಲ್ಲೂ ಎಲ್‌ಎಸಿ ದಾಟಿಲ್ಲ, ಅಥವಾ ಯಾವುದೇ ರೀತಿಯ ಆಕ್ರಮಣಕಾರಿ ಮಾರ್ಗವನ್ನ ಅನುಸರಿಸಿಲ್ಲ. ಫೈರಿಂಗ್ ಕೂಡ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.
ನಿನ್ನೆ ನಡೆದ ಘಟನೆಯಲ್ಲಿ ಚೀನಾದ ಪಿಎಲ್ಎ ಸೈನಿಕರೇ ಎಲ್‌ಎಸಿ ಉದ್ದಕ್ಕೂ ನಮ್ಮ ಫಾರ್ವರ್ಡ್ ಪೋಸ್ಟ್ಗಳ ಸಮೀಪ ಬರಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಸ್ವಂತ ಸೇನೆಯೇ ಇದಕ್ಕೆ ನಿರಾಕರಿಸಿದಾಗ, ಗಾಳಿಯಲ್ಲಿ ಕೆಲ ಸುತ್ತು ಗುಂಡು ಹಾರಿಸಿ ತನ್ನದೇ ಸೇನೆಯನ್ನ ಹದೆರಿಸುವ ಪ್ರಯತ್ನ ಮಾಡಿದೆ ಎಂದು ಭಾರತೀಯ ಸೇನೆ ಬಹಿರಂಗಪಡಿಸಿದೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯೇ, ಮಿಲಿಟರಿ ಮಟ್ಟದಲ್ಲಿ, ರಾಜತಾಂತ್ರಿಕ ಹಾಗೂ ರಾಜಕೀಯ ಮಟ್ಟದಲ್ಲಿ ಮಾತುಕತೆ ನಡೆಯುತ್ತಿರುವ ಹೊತ್ತಲ್ಲಿ ಆಕ್ರಮಣಕಾರಿ ಚಟುವಟಿಕೆಗಳನ್ನ ನಡೆಸುತ್ತಿದೆ. ಹಾಗೂ ಒಪ್ಪಂದಗಳನ್ನ ಉಲ್ಲಂಘಿಸುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ.
ನಮ್ಮ ಸೈನಿಕರು ಪ್ರಬುದ್ಧತೆಯಿಂದ ನಡೆದುಕೊಂಡಿದ್ದಾರೆ.
ಚೀನಾದ ಪ್ರಚೋದನೆಯ ಹೊರತಾಗಿಯೂ, ನಮ್ಮ ಸೈನಿಕರು ಬಹಳ ಸಂಯಮದಿಂದ ನಡೆದುಕೊಂಡಿದ್ದಾರೆ. ಪ್ರಬುದ್ಧತೆ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿದ್ದಾರೆ. ಶಾಂತಿ ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಆದರೆ ಏನೇ ಆದ್ರೂ ನಮ್ಮ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುತ್ತೇವೆ ಎಂದು ಭಾರತೀಯ ಸೇನೆ ಪುನರುಚ್ಛರಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post