ಸದ್ಯ ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಹೈದರಾಬಾದ್ನಲ್ಲಿ ಶೂಟಿಂಗ್ ನಡೆಸುತ್ತಿದೆ. ನಿರ್ದೇಶಕ ಅನೂಪ್ ಭಂಡಾರಿ, ಕಿಚ್ಚ ಸುದೀಪ್, ನಿರೂಪ್ ಭಂಡಾರಿಯನ್ನ ಒಳಗೊಂಡ ‘ಫ್ಯಾಂಟಮ್’ ತಂಡ ಈಗಾಗಲೇ ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಶೇಕಡ 70ರಷ್ಟು ಚಿತ್ರೀಕರಣ ಮುಗಿಸಿರುವ ‘ಫ್ಯಾಂಟಮ್’ ಚಿತ್ರಕ್ಕೆ, ಇದೀಗ ಹೊಸ ಕೋ-ಪ್ರೊಡ್ಯೂಸರ್ ಎಂಟ್ರಿ ಕೊಟ್ಟಿದ್ದಾರೆ. ಹೌದು.. ಈಗಾಗಲೇ ‘ದಿ ಟೆರರಿಸ್ಟ್’ ಸಿನಿಮಾ ನಿರ್ಮಾಣ ಮಾಡಿರುವ ಅಲಂಕಾರ್ ಪಾಂಡಿಯನ್ ‘ಫ್ಯಾಂಟಮ್’ ಸಿನಿಮಾದ ಹೊಸ ಕೋ-ಪ್ರೊಡ್ಯೂಸರ್.
ಸದ್ಯ, ಹೈದರಾಬಾದ್ನಲ್ಲಿ ಶೂಟಿಂಗ್ ನಡೆಸುತ್ತಿರುವ ‘ಫ್ಯಾಂಟಮ್’ ಟೀಂ, ಇಲ್ಲಿಂದ ಮುಂದಕ್ಕೆ ಕೇರಳದಲ್ಲಿ ಶೂಟ್ ಮಾಡೋ ಪ್ಲ್ಯಾನ್ ಹಾಕಿಕೊಂಡಿದೆ. ಆದರೆ, ಕೇರಳದ ಲಾಕ್ಡೌನ್ ಸಡಿಲವಾದ್ರೆ ಅಷ್ಟೇ, ಶೂಟಿಂಗ್ ಕೇರಳದಲ್ಲಿ ನಡೆಸಲು ಸಾಧ್ಯ. ಇಲ್ಲದಿದ್ರೆ, ಬೇರೆ ಲೊಕೇಶನ್ ಹುಡುಕ್ಬೇಕು ಅಂತ ನಿರ್ದೇಶಕ ಅನೂಪ್ ಭಂಡಾರಿ ಈ ಹಿಂದೆಯೇ ನ್ಯೂಸ್ ಫಸ್ಟ್ಗೆ ತಿಳಿಸಿದ್ದರು.
ಇನ್ನು, ‘ಫ್ಯಾಂಟಮ್’ ತಂಡ ಕೂಡಿಕೊಂಡಿರುವ ಅಲಂಕಾರ್ ಪಾಂಡಿಯನ್ಗೆ ಕಿಚ್ಚ ಟ್ವೀಟ್ನಲ್ಲಿ ವೆಲ್ಕಮ್ ಮಾಡಿದ್ದಾರೆ. ‘ನಮ್ಮ ಹೊಸ ಫ್ಯಾಮಿಲಿ ಮೆಂಬರ್ಗೆ ಸ್ವಾಗತ. ಜರ್ನಿ ಇನ್ನೂ ಇದೆ’ ಎಂದಿದ್ದಾರೆ. ‘ಫ್ಯಾಂಟಮ್’ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನವಿದ್ದು, ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.
Welcome @Alankar_Pandian on board as the co producer of #Phantom.
You are the new family member n we have a long journey ahead. #TheWorldOfPhantom https://t.co/wHVHQcKP2m pic.twitter.com/O87iNl0WUz— Kichcha Sudeepa (@KicchaSudeep) November 10, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post