ಇಟಲಿಯಲ್ಲಿ ಕ್ರೂರಿ ಕೊರೊನಾ ಮರಣ ಮೃದಂಗ ಬಾರಿಸಿದೆ. ನಿನ್ನೆ ಒಂದೇ ದಿನ ಇಟಲಿಯಲ್ಲಿ ಹೆಮ್ಮಾರಿಗೆ ಬರೋಬ್ಬರಿ 853 ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಕಳೆದ ಮಾರ್ಚ್ ಅಂತ್ಯದಿಂದ ಇದೇ ಮೊದಲ ಬಾರಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಇಟಲಿ ದಾಖಲೆ ಬರೆದಿದೆ.
ಅಷ್ಟೇ ಅಲ್ದೇ ನಿನ್ನೇ ಒಂದೇ ದಿನ ಇಟಲಿಯಲ್ಲಿ 23,232 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮೊಟ್ಟ ಮೊದಲು ಕೊರೊನಾಗೆ ತುತ್ತಾದ ದೇಶ ಇಟಲಿ. ಕಳೆದ ಫೆಬ್ರವರಿ ತಿಂಗಳೊಂದರಲ್ಲೇ ಇಟಲಿಯಲ್ಲಿ ಆರಂಭಿಕ 51,306 ಕೇಸ್ಗಳು ಪತ್ತೆಯಾಗಿದ್ವು. ಅದರೊಂದಿಗೆ ಜಾಗತಿಕ ಕೊರೊನಾ ಱಂಕ್ ಪಟ್ಟಿಯಲ್ಲಿ ಬ್ರಿಟನ್ ನಂತ್ರ ಎರಡನೇ ಸ್ಥಾನದಲ್ಲಿ ಇಟಲಿ ಇತ್ತು. ಸದ್ಯ ಮತ್ತೆ ಇಟಲಿಯಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post