ಅರ್ಜೆಂಟೀನಾದ ಫುಟ್‌ಬಾಲ್ ಲೆಜೆಂಡ್ ಡಿಯೇಗೋ ಮರಡೋನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಮರಡೋನಾ ಅವರು ಮೆದುಳಿಗೆ ಸಂಬಂಧಿಸಿದಂತೆ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
1986ರಲ್ಲಿ ಅರ್ಜೆಂಟೀನಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಡಿಯೇಗೊ ಮರಡೋನಾ ಅವರು ಅಕ್ಟೋಬರ್ 30, 1960 ರಂದು ಜನಿಸಿದ್ದರು. 2008 ರಿಂದ ಜುಲೈ 2010 ರವರೆಗೆ ಅರ್ಜೆಂಟೀನಾದ ರಾಷ್ಟ್ರೀಯ ಫುಟ್‌ಬಾಲ್ ತಂಡ ಮ್ಯಾನೇಜರ್ ಆಗಿದ್ದರು. ಇವರನ್ನ ಜಗತ್ತಿನ ಮಹಾನ್ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರೆಂದು ಹೇಳಲಾಗುತ್ತದೆ. ಜೊತೆಗೆ ಅತ್ಯಂತ ವಿವಾದಾತ್ಮಕ ಆಟಗಾರ ಅನ್ನೋ ಖ್ಯಾತಿಗೂ ಪಾತ್ರರಾಗಿದ್ದರು.
ಅಂತಾರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನದಲ್ಲಿ ಅರ್ಜೆಂಟೀನಾವನ್ನ 91 ಬಾರಿ ಪ್ರತಿನಿಧಿಸಿದ್ದರು. ಒಟ್ಟು ನಾಲ್ಕು ವರ್ಲ್ಡ್ ಕಪ್ ಸರಣಿಗಳಲ್ಲಿ ಭಾಗವಹಿಸಿ, 1986ರ ವಿಶ್ವಕಪ್ ಸರಣಿಯಲ್ಲಿ ತಮ್ಮ ನಾಯಕತ್ವದಲ್ಲಿ ಗೆಲ್ಲಿಸಿಕೊಟ್ಟಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post