ಬೆಂಗಳೂರು: ಕೊರೊನಾ ವ್ಯಾಕ್ಸಿನ್ ಸಾಗಣೆ, ಸಂಗ್ರಹ, ವಿತರಣೆ ಬಗ್ಗೆ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ್ದಾರೆ.
ಮಂಜುನಾಥ್ ಪ್ರಸಾದ್ ಉಲ್ಲೇಖಿಸಿದ ಪ್ರಮುಖ ಮಾಹಿತಿಗಳು..
- ಮೊದಲ ಹಂತದ ವ್ಯಾಕ್ಸಿನ್ನ್ನು ಆರೋಗ್ಯ ಇಲಾಖೆ ಸಿಬ್ಬಂದಿಗೆ ವಿತರಣೆ ಮಾಡಲಾಗುವುದು.
- ಪ್ರೈಮರಿ ಹೆಲ್ತ್ ಸೆಂಟರ್ಗಳು, ಮೊಬೈಲ್ ಟೆಸ್ಟಿಂಗ್ ಲ್ಯಾಬ್ಗಳು, ಮೆಟರ್ನಿಟಿ ಹೋಮ್ಗಳು, ರೆಫರಲ್ ಆಸ್ಪತ್ರೆಗಳು, 4 ಸಾವಿರ ಮೇಲ್ಪಟ್ಟ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ಗಳಿಗೆ ವಿತರಿಸಲಾಗುವುದು.
- ಇನ್ನು ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ ಕಾಲೇಜು, ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸ್ತಿರೋರಿಗೆ ಮೊದಲ ಆದ್ಯತೆ ನೀಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
- ಕೇಂದ್ರ ಸರ್ಕಾರದ ಸೂಚನೆಯಂತೆ 95 ಸಾವಿರ ಕೊರೊನಾ ವಾರಿಯರ್ಸ್ ಪಟ್ಟಿಯನ್ನು ಸಿದ್ಧ ಮಾಡಿದ್ದೇವೆ.
- ಕೊರೊನಾ ವ್ಯಾಕ್ಸಿನ್ ಸಂಗ್ರಹಕ್ಕೆ ನಮ್ಮಲ್ಲಿ ದೊಡ್ಡ 44 ಐಸ್ ಲ್ಯಾಂಡ್ ರೆಫ್ರಿಜಿರೇಟರ್ಗಳು ಇವೆ.
- ಒಂದೊಂದು ರೆಫ್ರಿಜರೇಟರ್ನಲ್ಲಿ 50 ಸಾವಿರ ವ್ಯಾಕ್ಸಿನ್ ಇಡಬಹುದು. ಲಭ್ಯವಿರುವ ರೆಫ್ರಿಜರೇಟರ್ಗಳಲ್ಲಿ ಒಟ್ಟು 22 ಲಕ್ಷ ವ್ಯಾಕ್ಸಿನ್ ಅನ್ನು ಸ್ಟೋರ್ ಮಾಡಬಹುದು. ಸಣ್ಣ ಪ್ರಮಾಣದ 150 ರೆಫ್ರಿಜರೇಟರ್ಗಳಿವೆ.
- ಹೆಚ್ಚಿನ ಜನಕ್ಕೆ ಕೊಡಬೇಕಾದಲ್ಲಿ ಹೆಚ್ಚಿನ ರೆಫ್ರಿಜರೇಟರ್ಗಳ ಖರೀದಿಗೆ ಆದೇಶ ಮಾಡಿದ್ದೇನೆ.
- ವ್ಯಾಕ್ಸಿನ್ ಟ್ರಾನ್ಸಪೋರ್ಟ್ಗೂ ವ್ಯವಸ್ಥೆ ಮಾಡಲಾಗುತ್ತೆ.
- ವ್ಯಾಕ್ಸಿನ್ ನೀಡಲು ಆರೋಗ್ಯ ಇಲಾಖೆಯ 500 ಸಿಬ್ಬಂದಿ, ಮೆಡಿಕಲ್ ಕಾಲೇಜಿನಿಂದ 500 ವಿದ್ಯಾರ್ಥಿಗಳು ಒಟ್ಟು 1 ಸಾವಿರ ಸಿಬ್ಬಂದಿಯನ್ನು ಬಳಸಿಕೊಳ್ತೇವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post