ವ್ಯಕ್ತಿಯೊಬ್ಬ ತನ್ನ ಆಡಿ ಕಾರಿನಿಂದ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ. ಇಷ್ಟೇ ಆಗಿದ್ರೆ ಇದು ಈ ಮಟ್ಟಿಗೆ ಸುದ್ದಿಯಾಗುತ್ತಿರಲಿಲ್ಲವೇನೋ. ಆದ್ರೆ ಆತ ಗುದ್ದಿದ ರಭಸಕ್ಕೆ ಮನೆಯ ಬಾಗಿಲು ಕಾರಿನ ವಿಂಡ್ಶೀಲ್ಡ್ಗೆ ಕಚ್ಚಿಕೊಂಡಿದ್ದು, ಅದರ ಸಮೇತ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಘಟನೆ ನಡೆದಿರೋದು ವೆಸ್ಟ್ ಯಾರ್ಕ್ಶೈರ್ನ ಡೀವ್ಸ್ಬರಿಯಲ್ಲಿ. ವ್ಯಕ್ತಿ ಇಲ್ಲಿನ ಮನೆಯೊಂದರ ಮುಂಬಾಗಿಲಿಗೆ ಡಿಕ್ಕಿ ಹೊಡೆದಿದ್ದ. ಅದರ ರಭಸಕ್ಕೆ ಬಾಗಿಲು ಕಳಚಿ ಕಾರಿನ ವಿಂಡ್ಶೀಲ್ಡ್ ಮಧ್ಯೆ ಕಚ್ಚಿಕೊಂಡಿತ್ತು. ಘಟನೆ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಚಾಲಕ, ಬಾಗಿಲ ಸಮೇತ ಹಲವು ಮೀಟರ್ ದೂರ ಡ್ರೈವ್ ಮಾಡಿಕೊಂಡು ಹೋಗಿದ್ದಾನೆ. ಬಳಿಕ ಪೊಲೀಸರು ಆತನನ್ನ ತಡೆದಿದ್ದಾರೆ.
ಕಾರು ಚಾಲಕ 18 ವರ್ಷ ವಯಸ್ಸಿನವನಾಗಿದ್ದ. ಮನೆಗೆ ಡಿಕ್ಕಿ ಹೊಡೆಯುವ ಮುನ್ನ ಮತ್ತೊಂದು ವಾಹನಕ್ಕೂ ಗುದ್ದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಆತ ಮದ್ಯಪಾನ ಅಥವಾ ಡ್ರಗ್ಸ್ನ ಅಮಲಿನಲ್ಲಿದ್ದ ಅನುಮಾನದ ಮೇಲೆ ಆತನನ್ನು ಅರೆಸ್ಟ್ ಮಾಡಲಾಗಿದೆ. ಅಪಘಾತದಲ್ಲಿ ಚಾಲಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ
ವೆಸ್ಟ್ ಯಾರ್ಕ್ಶೈರ್ನ ಸಂಚಾರಿ ಪೊಲೀಸ್ ದಳ ಅಪಘಾತದ ಫೋಟೋವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಮನೆ ಬಾಗಿಲು ಕಾರಿನ ವಿಂಡ್ಶೀಲ್ಡ್ ಮೇಲಿರೋದನ್ನ ನೋಡಿ ಟ್ವಿಟರ್ ಬಳಕೆದಾರರು ತಮಾಷೆಯಾಗಿ ಕಮೆಂಟ್ ಮಾಡಿದ್ದು, ಈ ಫೋಟೋ ಈಗ ವೈರಲ್ ಆಗಿದೆ.
Ashworth Rd, Dewsbury – Driver collided with a vehicle, then the front porch of a house – before then continuing to drive for several metres with front door attached to car. Driver arrested suspected unfit through drink/drugs. #wypthecost #fatal4 pic.twitter.com/ee8r9ZZc9A
— WYP Roads Policing Unit (@WYP_RPU) November 21, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post